HEALTH TIPS

ಭಾರತ- ಚೀನಾ ಒಟ್ಟಾಗಿ ಅಹಿಂಸಾ, ಕರುಣಾ ಆಧಾರಿತ ಕೆಲಸ ಮಾಡಬೇಕಿದೆ: ದಲೈ ಲಾಮಾ: ಮನೋರಮಾ ಇಯರ್ ಬುಕ್‌ 2023ರಲ್ಲಿ

 

              ತಿರುವನಂತಪುರ: ಐತಿಹಾಸಿಕವಾಗಿ ಬೌದ್ಧ ರಾಷ್ಟ್ರವಾಗಿರುವ ಚೀನಾವು 'ಅಹಿಂಸಾ' ಮತ್ತು 'ಕರುಣಾ' ಆದರ್ಶಗಳ ಪ್ರತೀಕವಾಗಿರುವ ಭಾರತೀಯ ಬುದ್ಧಿವಂತಿಕೆಯನ್ನು ಅನುಸರಿಸಿದರೆ ಇಡೀ ಜಗತ್ತಿಗೆ ಉಪಯೋಗವಾಗಲಿದೆ. ಎರಡೂ ರಾಷ್ಟ್ರಗಳ 50 ಶತಕೋಟಿ ಜನರು ಶಾಂತಿ ಬೆಳೆಸುವ ಕೆಲಸ ಮಾಡಬೇಕಿದೆ ಎಂದು ಟಿಟೆಬನ್‌ ಧರ್ಮಗುರು ದಲೈ ಲಾಮಾ ಅವರು ಮನೋರಮಾ ಇಯರ್ ಬುಕ್‌ 2023ರಲ್ಲಿನ ವಿಶೇಷ ಲೇಖನದಲ್ಲಿ ತಿಳಿಸಿದ್ದಾರೆ.

                ಕೆಲ ವರ್ಷಗಳಲ್ಲೇ ಭಾರತ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ಸ್ಥಾನ ಪಡೆದುಕೊಳ್ಳಲಿದೆ. ಇದರ ಜತೆಗೆ ಅಹಿಂಸಾ ಮತ್ತು ಕರುಣೆಯ ಸಂಪತ್ತನ್ನು ಹೊಂದಿದೆ. ಇದು ಧರ್ಮಗಳನ್ನು ಮೀರಿದ್ದಾಗಿದೆ. ಸಮಕಾಲೀನ ಸಮಾಜದಲ್ಲಿ ನೈತಿಕ ಮಾರ್ಗವನ್ನು ಪ್ರೋತ್ಸಾಹಿಸುತ್ತದೆ. ವಿಶ್ವಶಾಂತಿಯನ್ನು ಸಾಧಿಸಲು ಜನರು ತಮ್ಮೊಳಗೆ ಶಾಂತಿ ಮತ್ತು ಭೌತಿಕ ಬೆಳಬಣಿಗೆಯನ್ನು ಕಂಡುಕೊಳ್ಳಬೇಕಿದೆ. ದೈಹಿಕ ಆನಂದಕ್ಕಿಂತ ಇದು ಮುಖ್ಯವಾದುದ್ದು ಎಂದಿದ್ದಾರೆ.

                ಮಾನವರ ಸ್ವಭಾವವು ಸಹಾನುಭೂತಿಯಾಗಿದೆ. ಆದರೆ ಶಾಲೆಗೆ ಹೋಗಲು ಪ್ರಾರಂಭಿಸಿದ ನಂತರ ಸಹಾನುಭೂತಿ ಸ್ವಾಭಾವಿಕವಾಗಿ ಮರೆಯಾಗುತ್ತಿದೆ. ಆದ್ದರಿಂದ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ 'ಅಹಿಂಸೆ' ಮತ್ತು 'ಕರುಣೆ'ಯನ್ನು ಅಳವಡಿಸುವ ಅವಶ್ಯಕತೆ ಇದೆ. ಇದರ ಪ್ರಯೋಜನ ಭಾರತಕ್ಕೆ ಮಾತ್ರವಲ್ಲದೇ ಪ್ರಪಂಚದಾದ್ಯಂತ ಪಸರಿಸಲಿದೆ ಎಂದು ಹೇಳಿದ್ದಾರೆ.

                    ಟಿಬೆಟನ್ನರು ಭಾರತೀಯ ಚಿಂತನೆಯಿಂದ ಪ್ರಭಾವಿತರಾಗಿದ್ದಾರೆ. ಗೌರವ ಮತ್ತು ಕೃತಜ್ಞತಾ ಪೂರ್ವಕವಾಗಿ ಕಳೆದುಹೋದ ಹಲವಾರು ಪ್ರಾಚೀನ ಭಾರತೀಯ ಗ್ರಂಥಗಳನ್ನು ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಿಸುತ್ತಿದ್ದೇವೆ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries