ಕೋಯಿಕ್ಕೋಡ್: 2024ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.
ಕೇರಳ ಸಾಹಿತೋತ್ಸವದಲ್ಲಿ ಮಾತನಾಡಿದ ಅವರು, 2019ರ ಗೆಲುವು ಮತ್ತೆ ಸಾಧಿಸುವುದು ಬಿಜೆಪಿ ಪಾಲಿಗೆ ಕಷ್ಟವಾಗಲಿದೆ. ಕನಿಷ್ಠ 50 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಪುಲ್ವಾಮ ಮತ್ತು ಬಾಲಾಕೋಟ್ ದಾಳಿಯಂತಹ ಘಟನೆಗಳು ಕೊನೆಯ ಕ್ಷಣದಲ್ಲಿ ಬಿಜೆಪಿಗೆ ನೆರವಾಗಿ ಪರಿಣಮಿಸಿತ್ತು. ಆದರೆ 2024ರಲ್ಲಿ ಪರಿಸ್ಥಿತಿ ಭಿನ್ನವಾಗಿರಲಿದೆ ಎಂದು ತಿಳಿಸಿದರು.
ಬಿಜೆಪಿಗೆ ಈಗಾಗಲೇ ಹಲವು ರಾಜ್ಯಗಳಲ್ಲಿ ಅಧಿಕಾರ ನಷ್ಟವಾಗಿವೆ. 2024ರ ಚುನಾವಣೆಯಲ್ಲಿ ಸರ್ಕಾರ ಬಹುಮತ ಕಳೆದುಕೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.