HEALTH TIPS

2024ರ ಲೋಕಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳು ಸ್ಪಷ್ಟ ಮಹತ್ವ ಹೊಂದಲಿವೆ:ಅಮರ್ತ್ಯ ಸೇನ್

 

                ಕೋಲ್ಕತಾ: ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಗೆ ಎದುರಾಳಿಯೇ ಇರುವುದಿಲ್ಲ ಮತ್ತು ಅದು ಏಕಪಕ್ಷೀಯ ಕಣವಾಗಿರಲಿದೆ ಎಂದು ಭಾವಿಸುವುದು ತಪ್ಪಾಗುತ್ತದೆ ಎಂದು ಒತ್ತಿ ಹೇಳಿರುವ ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು,ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಅನೇಕ ಪ್ರಾದೇಶಿಕ ಪಕ್ಷಗಳು ಸ್ಪಷ್ಟವಾಗಿ ಮಹತ್ವದ ಪಾತ್ರವನ್ನು ಹೊಂದಿರಲಿವೆ ಎಂದು ಅಭಿಪ್ರಾಯಿಸಿದ್ದಾರೆ.

                  ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಭಾರತದ ಮುಂದಿನ ಪ್ರಧಾನಿಯಾಗುವ ಸಾಮರ್ಥ್ಯವನ್ನು ಹೊಂದಿದ್ದಾರಾದರೂ ಬಿಜೆಪಿ ವಿರುದ್ಧದ ಸಾರ್ವಜನಿಕ ನಿರಾಶೆಯನ್ನು ಮತಗಳನ್ನಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗಬಹುದೇ ಎನ್ನುವುದು ಇನ್ನಷ್ಟೇ ಸಾಬೀತಾಗಬೇಕಿದೆ ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ವಿಶೇಷ ಸಂದರ್ಶನಲ್ಲಿ ಸೇನ್ ಹೇಳಿದರು.

                 'ಹಲವಾರು ಪ್ರಾದೇಶಿಕ ಪಕ್ಷಗಳು ಮುಖ್ಯವಾಗಿವೆ ಎಂದು ನಾನು ಭಾವಿಸಿದ್ದೇನೆ. ಡಿಎಂಕೆ ಮುಖ್ಯವಾದ ಪಕ್ಷವಾಗಿದೆ,ತೃಣಮೂಲವೂ ನಿಸ್ಸಂಶಯವಾಗಿ ಮುಖ್ಯ ಪಕ್ಷವಾಗಿದೆ ಮತ್ತು ಸಮಾಜವಾದಿ ಪಕ್ಷವೂ ಕೊಂಚ ನೆಲೆಯನ್ನು ಹೊಂದಿದೆ,ಆದರೆ ಅದು ವಿಸ್ತರಣೆಗೊಳ್ಳಬಹುದೇ ಎನ್ನುವುದು ನನಗೆ ತಿಳಿದಿಲ್ಲ' ಎಂದು ಹೇಳಿದ ಸೇನ್,'ಬಿಜೆಪಿಯು ದೇಶದ ಹಿಂದುಗಳ ಪರವಾದ ಪಕ್ಷವಾಗಿ ತನ್ನನ್ನು ಸ್ಥಾಪಿಸಿಕೊಂಡಿರುವುದರಿಂದ ಅದರ ಸ್ಥಾನವನ್ನು ಪಡೆಯಲು ಇತರ ಯಾವುದೇ ಪಕ್ಷಕ್ಕೆ ಸಾಧ್ಯವಿಲ್ಲ ಎಂಬ ನಕಾರಾತ್ಮಕ ನಿಲುವನ್ನು ತಳೆಯುವುದು ತಪ್ಪಾಗುತ್ತದೆ. ಬಿಜೆಪಿಯು ಭಾರತದ ದೃಷ್ಟಿಕೋನವನ್ನು ಗಣನೀಯವಾಗಿ ತಗ್ಗಿಸಿದೆ. ಅದು ಭಾರತದ ಕುರಿತು ತಿಳುವಳಿಕೆಯನ್ನು ಕೇವಲ ಹಿಂದು ಭಾರತ ಮತ್ತು ಹಿಂದಿ ಭಾಷಿಕ ಭಾರತವಾಗಿ ಸಂಕುಚಿತಗೊಳಿಸಿದೆ. ಇದು ಎಷ್ಟೊಂದು ತೀವ್ರವಾಗಿದೆ ಎಂದರೆ ಇಂದು ಭಾರತದಲ್ಲಿ ಬಿಜೆಪಿಗೆ ಪರ್ಯಾಯವಿಲ್ಲದಿದ್ದರೆ ಅದು ದುಃಖಕರವಾಗುತ್ತದೆ ಎಂದರು.

             ಬಿಜೆಪಿಯು ಸದೃಢ ಮತ್ತು ಶಕ್ತಿಶಾಲಿಯಾಗಿ ಕಾಣುತ್ತಿದ್ದರೆ ಅಷ್ಟೇ ದೌರ್ಬಲ್ಯಗಳನ್ನೂ ಅದು ಹೊಂದಿದೆ. ಹೀಗಾಗಿ ಇತರ ರಾಜಕೀಯ ಪಕ್ಷಗಳು ನಿಜಕ್ಕೂ ಪ್ರಯತ್ನಿಸಿದರೆ ಸಹಮತಕ್ಕೆ ಬರಲು ಅವುಗಳಿಗೆ ಸಾಧ್ಯವಾಗುತ್ತದೆ. ಬಿಜೆಪಿಯೇತರ ಪಕ್ಷಗಳು ಒಂದಾಗುತ್ತವೆ ಎನ್ನುವುದನ್ನು ತಳ್ಳಿಹಾಕಲು ನನಗೆ ಸಾಕಷ್ಟು ಕಾರಣಗಳು ಗೊತ್ತಿಲ್ಲ' ಎಂದರು.

              ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾರತದ ಮುಂದಿನ ಪ್ರಧಾನಿಯಾಗಬಹುದೇ ಎಂಬ ಪ್ರಶ್ನೆಗೆ ಸೇನ್,ಅವರಿಗೆ ಆ ಸಾಮರ್ಥ್ಯವಿದೆ. ಆದರೆ ಭಾರತದಲ್ಲಿ ಒಡಕುಗಳಿಗೆ ಅಂತ್ಯ ಹಾಡಲು ತನ್ನ ನಾಯಕತ್ವವನ್ನು ಹೊಂದುವ ನಿಟ್ಟಿನಲ್ಲಿ ಬಿಜೆಪಿಯ ವಿರುದ್ಧ ಸಾರ್ವಜನಿಕರಲ್ಲಿರುವ ಅತೃಪ್ತಿಯನ್ನು ಸಮಗ್ರವಾಗಿ ಸೆಳೆಯಲು ಅವರಿಗೆ ಸಾಧ್ಯವಾಗಬಹುದೇ ಎನ್ನುವುದು ಇನ್ನೂ ಸಾಬೀತಾಗಿಲ್ಲ ಎಂದು ಉತ್ತರಿಸಿದರು.

              ಕಾಂಗ್ರೆಸ್ 'ದುರ್ಬಲ'ಗೊಂಡಿರುವುದರಿಂದ 2024ರ ಚುನಾವಣೆಗಳಲ್ಲಿ ಗೆಲ್ಲುವ ಅದರ ಸಾಮರ್ಥ್ಯದ ಬಗ್ಗೆ ಸೇನ್ ಶಂಕೆ ವ್ಯಕ್ತಪಡಿಸಿದರಾದರೂ,ಅದು ಅಖಿಲ ಭಾರತ ದೃಷ್ಟಿಕೋನವನ್ನು ಒದಗಿಸಬಲ್ಲ ಏಕೈಕ ಪಕ್ಷವಾಗಿದೆ ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries