ಭೋಪಾಲ್: ಭಾರತವು 2047ರ ಹೊತ್ತಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ಜಗತ್ತಿಗೆ ಮಾದರಿಯಾಗಲಿದೆ ಎಂದು ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್‌ಐಆರ್) ಮಹಾನಿರ್ದೇಶಕಿ ಡಾ. ನಲ್ಲತಂಬಿ ಕಲೈಸೆಲ್ವಿ ಹೇಳಿದ್ದಾರೆ.
ಎಂಟನೇ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ (ಐಐಎಸ್‌ಎಸ್-2022)) ಪಾಲ್ಗೊಳ್ಳಲು ಇಲ್ಲಿಗೆ ಬಂದಿರುವ ಅವರು ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದು, 2030ರಲ್ಲಿ ವಿಜ್ಞಾನ ಕ್ಷೇತ್ರದ ಅಗ್ರ ಮೂರು ದೇಶಗಳಲ್ಲಿ ಭಾರತವೂ ಒಂದಾಗಲಿದೆ ಎಂದರು.
ಯುವ ವಿಜ್ಞಾನಿಗಳಿಗೆ ನೀಡುವ ಪ್ರಶಸ್ತಿಗಳನ್ನು ನಿಲ್ಲಿಸಲಾಗಿದೆ ಎಂಬುದನ್ನು ಅಲ್ಲಗಳೆದ ಅವರು, ಮುಂದಿನ ದಿನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಬಹು ಆಯಾಮದ ಬೆಳವಣಿಗೆಯನ್ನು ಜನರು ಕಾಣಬಹುದು ಎಂದರು.
ವಿಜ್ಞಾನ ಕ್ಷೇತ್ರದಲ್ಲಿ ಭಾರತವು ಆಡಳಿತ ಶಕ್ತಿ ಎಂಬುದನ್ನು 2070 ಹೊತ್ತಿಗೆ ಜಗತ್ತು ಒಪ್ಪಿಕೊಳ್ಳಲಿದೆ ಎಂದೂ ಕಲೈಸೆಲ್ವಿ ಅಭಿಪ್ರಾಯಪಟ್ಟರು.