ಕಾಸರಗೋಡು : ತೆಂಕುತಿಟ್ಟಿನ ಬಹುತೇಕ ಕಲಾವಿದರು ಒಂದೇ ಛಾವಣಿಯಡಿ ತಮ್ಮ ಪ್ರಸ್ತುತಿ ನಡೆಸುವ ವಿಶಿಷ್ಟ ಕಾರ್ಯಕ್ರಮ "ಕಾಸರಗೋಡು ಯಕ್ಷಗಾಯನ-ವಚನೋತ್ಸವ" ಜ.20ರಂದು ನಗರದ ತಾಳಿಪಡ್ಪು ಹೋಟೆಲ್ ಉಡುಪಿ ಗಾರ್ಡನ್ ನ ಮಥುರಾ ಸಭಾಂಗಣದಲ್ಲಿ ನಡೆಯಲಿದೆ.
ಗಡಿನಾಡು ಕಾಸರಗೋಡು ಜಿಲ್ಲೆಯ ಇತಿಹಾಸದಲ್ಲೇ ಪ್ರಥಮ ಬಾರಿಗೆ ಯಕ್ಷಗಾನ ಕ್ಷೇತ್ರದ ದಿಗ್ಗಜರು, ನಿರೀಕ್ಷೆ ಮೂಡಿಸುವ ಕಲಾವಿದರು ಏಕಪ್ರಕಾರವಾಗಿ ಒಂದಿಡೀ ದಿನ ನಡೆಸುವ ಕಾರ್ಯಕ್ರಮ ಇದಾಗಿದೆ. ಕೊಡುಗೈ ದಾನಿ, ಕಲಾಪೆÇೀಷಕ, ಉದ್ಯಮಿ ರಾಮಪ್ರಸಾದ್ ಕಾಸರಗೋಡು ಅವರ 60 ರ ವಸಂತೋತ್ಸವ ಕಾರ್ಯಕ್ರಮ ಅಂಗವಾಗಿ ಒಂದು ವರ್ಷಗಳ ಕಾಲ ನಡೆಸುವ ಕಲಾಸರಣಿಯ ಸಲುವಾಗಿ ಈ ಬಹುನಿರೀಕ್ಷಿತ ಸಮಾರಂಭ ನಡೆಯಲಿದೆ. ರಾಮಪ್ರಸಾದ್ ಕಾಸರಗೋಡು-60 ಅಭಿನಂದನಾ ಸಮಿತಿಯ ನೇತೃತ್ವದಲ್ಲಿ ಬೆಳಗ್ಗೆ 9.30ರಿಂದ ರಾತ್ರಿ 8.30ರ ವರೆಗೆ ಈ ಯಕ್ಷ ಕಲಾ ರಸ ಪಲ್ಲವಿ ಜರುಗಲಿದೆ.
ಯಕ್ಷಗಾಯನ-ವಚನೋತ್ಸವ ಎಂಬ ಹೆಸರಿನಲ್ಲಿ ಗಾನ ಮಾಧುರ್ಯಕ್ಕೆ, ಮಾತಿನ ಮಂಟಪಕ್ಕೆ ಮಹತ್ವ ನೀಡುವ ಗಾನವೈಭವ ಮತ್ತು ತಾಳಮದ್ದಳೆಗಳು ಈ ವೇಳೆ ಪ್ರಸ್ತುತಗೊಳ್ಳಲಿವೆ. ಬೆಳಗ್ಗೆ 9.30ಕ್ಕೆ ಆರಮಭಗೊಳ್ಳುವ ಸಮಾರಂಭಕ್ಕೆ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಚಾಲನೆ ನೀಡುವರು. ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಚತೆ ವಹಿಸುವರು. ವಿಶ್ರಾಂತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಎಡನೀರು, ವಾರ್ಡ್ ಸದಸ್ಯೆ ಅಶ್ವಿನಿ ಜಿ.ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕೀರ್ತನಾ ರಾಹುಲ್ ಭಟ್ ಕಾಸರಗೋಡು ಸ್ವಾಗತಿಸುವರು. ಸಮಿತಿ ಪ್ರಧಾನ ಕಾರ್ಯದರ್ಶಿ ಶಿವರಾಮ ಕಾಸರಗೋಡು ಕಾರ್ಯಕ್ರಮ ನಿರೂಪಿಸುವರು. ನಮಿತಾ ವಸಂತ್ ಕಾಸರಗೋಡು ವಂದಿಸುವರು.
ನಂತರ ನಡೆಯುವ ಗಾನವೈಭವದಲ್ಲಿ ಭಾಗವತಿಕೆಯಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಡಾ.ಸತೀಶ ಪುಣಿಂಚತ್ತಾಯ ಪೆರ್ಲ, ಡಾ.ಸತ್ಯನಾರಾಯಣ ಪುಣಿಂಚತ್ತಾಯ ಪೆರ್ಲ ಮೊದಲಾದವರು ಭಾಗವಹಿಸುವರು. ಚೆಂಡೆ-ಮದ್ದಲೆಗಳಲ್ಲಿ ಲವಕುಮಾರ್ ಐಲ, ಕೌಶಿಕ್ ರಾವ್ ಪುತ್ತಿಗೆ, ಮತ್ತಿತರರು ಸಹಕರಿಸುವರು.
ಮಧ್ಯಾಹ್ನ 1 ಗಂಟೆಗೆ ನಡೆಯುವ ಮೊದಲ ತಾಳಮದ್ದಳೆಯಲ್ಲಿ "ಅಂಗದ ಸಂಧಾನ" ಪ್ರಸಂಗ ಜರುಗಲಿದ್ದು, ಭಾಗವತಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವಹಿಸುವರು. ಚೆಂಡೆ-ಮದ್ದಲೆಗಳಲ್ಲಿ ದೇಲಂತಮಜಲು ಸುಬ್ರಹ್ಮಣ್ಯ ಭಟ್, ಲವಕುಮಾರ್ ಐಲ, ಕೌಶಿಕ್ ರಾವ್ ಪುತ್ತಿಗೆ, ಮತ್ತಿತರರು ಸಹಕರಿಸುವರು. ಅರ್ಥಧಾರಿಗಳಾಗಿ ಉಜಿರೆ ಅಶೋಕ ಭಟ್, ಸಪರ್ಂಗಳ ಈಶ್ವರ ಭಟ್, ದಿವಾಣ ಶಿವಶಂಕರ ಭಟ್ ಭಾಗವಹಿಸುವರು.
3 ಗಂಟೆಗೆ ನಡೆಯುವ ಎರಡನೇ ತಾಳಮದ್ದಲೆಯಲ್ಲಿ "ಮಾಗಧ ವಧೆ" ಪ್ರಸಂಗ ಪ್ರಸ್ತುತಗೊಳ್ಳಲಿದ್ದು, ಭಾಗವತಿಕೆಯಲ್ಲಿ ಪುತ್ತಿಗೆ ರಘುರಾಮ ಹೊಳ್ಳ, ಚೆಂಡೆ-ಮದ್ದಲೆಗಳಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಶ್ರೀಶ ನಾರಾಯಣ ಕೋಳಾರಿ, ಮತ್ತಿತರರು ಸಹಕರಿಸುವರು. ಅರ್ಥಧಾರಿಗಳಾಗಿ ಡಾ.ಎಂ.ಪ್ರಭಾರ ಜೋಷಿ, ಪೆÇ್ರ,ಎಂ.ಎಲ್.ಸಾಮಗ, ವಿನಯ ಆಚಾರ್ ಹೊಸಬೆಟ್ಟು ಭಾಗವಹಿಸುವರು.
ಸಂಜೆ 6 ಗಂಟೆಗೆ ಮೂರನೇ ತಾಳಮದ್ದಲೆಯಲ್ಲಿ "ಕರ್ಣಾರ್ಜುನ " ಪ್ರಸಂಗ ಜರುಗಲಿದ್ದು, ಭಾಗವತರಾಗಿ ಡಾ.ಸತೀಶ ಪುಣಿಂಚಿತ್ತಾಯ ಪೆರ್ಲ, ಚೆಂಡೆ-ಮದ್ದಲೆಗಳಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಶ್ರೀಶ ನಾರಾಯಣ ಕೋಳಾರಿ, ಸಮೃದ್ಧ ಪುಣಿಂಚತ್ತಾಯ ಪೆರ್ಲ, ಮತ್ತಿತರರು ಸಹಕರಿಸುವರು. ಅರ್ಥಧಾರಿಗಳಾಗಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ, ವೇದಮೂರ್ತಿ ನಾಗೇಂದ್ರ ಭಟ್ ಕೂಡ್ಲು, ಸುಬ್ರಹ್ಮಣ್ಯ ಬೈಪಡಿತ್ತಾಯ, ಜಿ.ಕೆ.ಅಡಿಗ ಕೂಡ್ಲು, ಶೇಣಿ ವೇಣುಗೋಪಾಲ ಭಟ್ ಮತ್ತಿತರರು ಭಾಗವಹಿಸುವರು.
ಸಮಾರಂಭದಲ್ಲಿ ರುಚಿಕರ ಭೋಜನ, ಉಪಹಾರ, ಚಹಾ, ಪಾನಕಗಳ ವ್ಯವಸ್ಥೆ ಇರುವುದು.
20ರಂದು ಕಾಸರಗೋಡು ಯಕ್ಷಗಾಯನ-ವಚನೋತ್ಸವ
0
ಜನವರಿ 15, 2023
Tags