ಕಾಸರಗೋಡು: ಚೆಸ್ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ಸಹಯೋಗದಲ್ಲಿ ಮಾದಕವಸ್ತು ಮುಕ್ತ ಬೀದಿ ಯೋಜನೆಯನ್ವಯ ಕಾಞಂಗಾಡು ಟೌನ್ ಸ್ಕ್ವೇರ್ ವಠಾರದಲ್ಲಿ ಏಕಕಾಲದಲ್ಲಿ ಚೆಸ್ ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕೇಂದ್ರೀಯ ವಿದ್ಯಾಲಯ ರಾಷ್ಟ್ರೀಯ ಜೂನಿಯರ್ ಚಿನ್ನದ ಪದಕ ವಿಜೇತ ಅರ್ಪಿತ್ ಎಸ್. ಬಿಜೋಯ್ ಅವರು ಏಕಕಾಲದಲ್ಲಿ 20ಮಂದಿ ಚೆಸ್ ಆಟಗಾರರೊಂದಿಗೆ ಚೆಸ್ ಆಟವಾಡುವ ಮೂಲಕ ಗಮನಸೆಳೆದರು. ಚೆಸ್ ಆಟದೊಂದಿಗೆ ಪೇಟೆಯ ಜನತೆಗೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಿಳಿಹೇಳುವ ಮೂಲಕ ಮಾದಕವಸ್ತು ವಿರುದ್ಧ ಜಾಗೃತಿಯನ್ನೂ ಮೂಡಿಸಲಾಯಿತು.
ಮಾದಕವಸ್ತು ಮುಕ್ತ ಬೀದಿ ಏಕಕಾಲದಲ್ಲಿ 20 ಸ್ಪರ್ಧಾಳುಗಳನ್ನು ಎದುರಿಸಿದ ಪೋರ
0
ಜನವರಿ 27, 2023
Tags