ಕೊಟ್ಟಾಯಂ: ಮದುವೆಯ ಮೂಲಕ ತಮ್ಮ ಶ್ರೀಮಂತಿಕೆ ಪ್ರದರ್ಶಿಸುವವರ ನಡುವೆ ಸರ್ಕಾರಿ ಅಧಿಕಾರಿಗಳಿಬ್ಬರು 20 ಮಕ್ಕಳ ಶಿಕ್ಷಣದ ಜವಾಬ್ದಾರಿ ವಹಿಸಿಕೊಂಡು ಸರಳವಾಗಿ ವಿವಾಹವಾಗುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪ್ ರ್ಯಾಂಕಿಂಗ್ ಪಡೆದ ಆರ್ಯಾ ಆರ್ ನಾಯರ್ ಮತ್ತು ಅಹಮದಾಬಾದ್ನ ಭಾರತೀಯ ಅಂಚೆ ಸೇವೆ (ಐಪಿಒಎಸ್)ಯ ಸೂಪರಿಂಟೆಂಡೆಂಟ್ ಆಗಿರುವ ಶಿವಂ ತ್ಯಾಗಿ ಸರಳ ವಿವಾಹವಾಗಿದ್ದಾರೆ.
ಪಂಪಾಡಿಯ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಶೇಷ ವಿವಾಹ ಕಾಯಿದೆಯಂತೆ ವಿವಾಹ ನೆರವೇರಿತು. ಆಡಂಬರದ ಮದುವೆಯನ್ನು ತಪ್ಪಿಸುವ ಮೂಲಕ, ಕೊಟ್ಟಾಯಂನ ವಝೂರ್‌ನಲ್ಲಿರುವ ಮಕ್ಕಳ ಮನೆ 'ಪುಣ್ಯಂ'ನಲ್ಲಿ 20 ಮಕ್ಕಳ ಶೈಕ್ಷಣಿಕ ವೆಚ್ಚದ ಜವಾಬ್ದಾರಿ ತೆಗೆದುಕೊಳ್ಳಲು ನವದಂಪತಿ ಇದೇ ಸಂದರ್ಭದಲ್ಲಿ ನಿರ್ಧರಿಸಿದರು.
ಕೊಟ್ಟಾಯಂ ಮೂಲದ ಆರ್ಯಾ, ಪ್ರಸ್ತುತ ನಾಗಪುರದಲ್ಲಿ ಭಾರತೀಯ ಕಂದಾಯ ಸೇವೆಗಾಗಿ ತರಬೇತಿ ಪಡೆಯುತ್ತಿದ್ದಾರೆ. ಅವರು UPSC ನಾಗರಿಕ ಸೇವಾ ಪರೀಕ್ಷೆ-2020 ರಲ್ಲಿ 113 ನೇ ರ್ಯಾಂಕ್ ಗಳಿಸಿದ್ದಾರೆ. ಭಾರತೀಯ ಅಂಚೆ ಸೇವಾ ಸೂಪರಿಂಟೆಂಡೆಂಟ್ ಆಗಿರುವ ಶಿವಂ ತ್ಯಾಗಿ ದೆಹಲಿಯ ಮೂಲದವರು.