ಕಾಸರಗೋಡು: ಜಿ-20 ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಮೂಲಕ ಭಾರತ ತನ್ನ ನಾಯಕತ್ವ ಗುಣವನ್ನು ವಿಶ್ವಕ್ಕೆ ಸಾಬೀತುಪಡಿಸಿದೆ ಎಂದು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ.ಎಚ್. ವೆಂಕಟೇಶ್ವರಲು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯ ಆವರಣದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಅವರು ಧ್ವಜಾರೋಹಣ ನಡೆಸಿ ಮಾತನಾಡಿದರು. ಸಮಾಜ ಕಟ್ಟುವ ದೊಡ್ಡ ಗುರಿ ನಮ್ಮ ಮುಂದಿದೆ. ಸುಸ್ಥಿರ ಅಭಿವೃದ್ಧಿಯೂ ಅತ್ಯಗತ್ಯ. ಬಡತನ ನಿರ್ಮೂಲನೆ, ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ ಮತ್ತು ಲಿಂಗ ಸಮಾನತೆ ಮಹತ್ವದ ಗುರಿಗಳಾಗಿದ್ದು, ಇವುಗಳನ್ನು ಸಾಧಿಸುವಲ್ಲಿ ವಿಶ್ವವಿದ್ಯಾನಿಲಯಗಳ ಪಾತ್ರವೂ ಮಹತ್ತರವಾದುದು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ತಿಳಿಸಿದರು.
ವಿಶ್ವ ವಿದ್ಯಾಲಯದಲ್ಲಿ ಕಲಿಯುತ್ತಿರುವ ದೇಶದ 20 ರಾಜ್ಯಗಳ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ತಮ್ಮ ರಾಜ್ಯದ ಭಾಷೆಗಳಲ್ಲಿ ಗಣರಾಜ್ಯೋತ್ಸವದ ಸಂದೇಶವನ್ನು ನೀಡಿದರು. ಉಪಕುಲಪತಿ ಪೆÇ್ರ.ಎಚ್. ವೆಂಕಟೇಶ್ವರಲು ರಾಜಭಾಷಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಿದರು. ರಿಜಿಸ್ಟ್ರಾರ್ ಡಾ.ಎಂ. ಮುರಳೀಧರನ್ ನಂಬಿಯಾರಿ, ಹಣಕಾಸು ಅಧಿಕಾರಿ ಡಾ.ಜೋಜೋ ಕೆ. ಜೋಸೆಫ್, ಪರೀಕ್ಷಾ ನಿಯಂತ್ರಕ ಪ್ರಭಾರಿ ಪ್ರಾಧ್ಯಾಪಕ ಎಂ.ಎನ್. ಮುಸ್ತಫಾ, ವಿದ್ಯಾರ್ಥಿಕಲ್ಯಾಣ ವಿಭಾಗದ ಡೀನ್ ಪೆÇ್ರಫೆಸರ್ ಕೆ. ಅರುಣ್ ಕುಮಾರ್, ಡೀನ್‍ಗಳು, ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.
ಜಿ-20 ಅಧ್ಯಕ್ಷ ಸ್ಥಾನದಿಂದ ದೇಶದ ನಾಯಕತ್ವಗುಣ ವಿಶ್ವಕ್ಕೆ ಸಾಬೀತು: ವಿ.ವಿ ಉಪಕುಲಪತಿ
0
ಜನವರಿ 26, 2023
Tags