ನವದೆಹಲಿ :ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ 21 ಅತಿ ದೊಡ್ಡ ಅನಾಮಿಕ ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ವಿಜೇತರ ಹೆಸರುಗಳನ್ನು ಇಡಲು ಕೇಂದ್ರ ಸರಕಾರ ನಿರ್ಧರಿಸಿದೆ. ನೇತಾಜಿ ಸುಭಾಶ್ ಚಂದ್ರ ಬೋಸ್ ಜನ್ಮ ದಿನವಾದ ಜನವರಿ 23ರಂದು ಈ ಕಾರ್ಯಕ್ರಮ ನಡೆಯಲಿದೆ.
ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.ಜನವರಿ 23ನ್ನು 'ಪರಾಕ್ರಮ ದಿವಸ್' ಆಗಿ ಆಚರಿಸಲಾಗುತ್ತಿದೆ.
ನೇತಾಜಿ
ಸುಭಾಶ್ ಚಂದ್ರ ಬೋಸ್ ಎಂಬುದಾಗಿ ಹೆಸರಿಸಲ್ಪಟ್ಟಿರುವ ದ್ವೀಪದಲ್ಲಿ ಅವರ ಸ್ಮರಣಾರ್ಥ
ನಿರ್ಮಿಸಲಾಗುವ ರಾಷ್ಟ್ರೀಯ ಸ್ಮಾರಕದ ಮಾದರಿಯೊಂದನ್ನೂ ಪ್ರಧಾನಿ ಮೋದಿ ಈ ಸಂದರ್ಭದಲ್ಲಿ
ಅನಾವರಣಗೊಳಿಸುವರು ಎಂದು ಹೇಳಿಕೆಯೊಂದು ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್
ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿರಿಸಿಕೊಂಡು, ನೇತಾಜಿಯ ಸ್ಮರಣೆಯನ್ನು
ಶಾಶ್ವತಗೊಳಿಸಲು ರಾಸ್ ಐಲ್ಯಾಂಡ್ ದ್ವೀಪಕ್ಕೆ ನೇತಾಜಿ ಸುಭಾಸ್ಚಂದ್ರ ಬೋಸ್ ದ್ವೀಪ
ಎಂಬುದಾಗಿ ಪ್ರಧಾನಿ ಮೋದಿ 2018ರಲ್ಲಿ ದ್ವೀಪಕ್ಕೆ ನೀಡಿದ್ದ ಭೇಟಿಯ ವೇಳೆ
ಹೆಸರನ್ನಿಟ್ಟಿದ್ದರು ಎಂದು ಹೇಳಿಕೆ ತಿಳಿಸಿದೆ.
ನೀಲ್ ಐಲ್ಯಾಂಡ್ ಮತ್ತು ಹ್ಯಾವ್ಲಾಕ್ ಐಲ್ಯಾಂಡ್ಗಳಿಗೂ ಕ್ರಮವಾಗಿ ಶಹೀದ್ ದ್ವೀಪ್ ಮತ್ತು ಸ್ವರಾಜ್ ದ್ವೀಪ್ ಎಂಬುದಾಗಿ ಮರುನಾಮಕರಣ ಮಾಡಲಾಗಿತ್ತು.