ಕಾಸರಗೋಡು: ರಂಗಚಿನ್ನಾರಿ ಕಾಸರಗೋಡು ಇದರ ಮಹಿಳಾ ಘಟಕ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಕಾರದೊಂದಿಗೆ 'ನಾರಿ ಚಿನ್ನಾರಿ ಸಂಸ್ಕøತಿ ಕಲರವ' ಕಾರ್ಯಕ್ರಮ ಜ. 22ರಂದು ಮಧ್ಯಾಃನ 3ಕ್ಕೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರುಗಲಿದೆ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡುವರು. ಹಿರಿಯ ಲೆಕ್ಕಪರಿಶೋಧಕಿ ತಾರಾ ಜಗದೀಶ್ ಅಧ್ಯಕ್ಷತೆ ವಹಿಸುವರು.ಖ್ಯಾತ ವೈದ್ಯೆ ಡಾ. ವೀಣಾ ಮಂಜುನಾಥ್ ಹಾಗೂ ಕಲಾವಿದೆ ಕುಸುಮಾ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ನಂತರ ನಡೆಯುವ ಸಂಸ್ಕøತಿ ಕಲರವ ಕಾರ್ಯಕ್ರಮದಲ್ಲಿ ಡಾ. ಯು. ಮಹೇಶ್ವರಿ, ವೇದಾವತೀ, ಬಬಿತಾ ಎ, ವಿಜಯಲಕ್ಷ್ಮೀ ಶ್ಯಾನುಭಾಗ್, ಸ್ನೇಹಲತಾದಿವಾಕರ್ ಕುಂಬಳೆ, ಮಾಲತೀಜಗದೀಶ್, ಗೀತಾ ಎಂ. ಭಟ್ ಪಾಲ್ಗೊಳ್ಳುವರು.
ಶಿವಾನಿ ಕಾಸರಗೋಡು ಅವರಿಂದ ಮೋಹಿನಿಯಾಟ್ಟಂ, ಶೈಲಜಾ ಕೂಡ್ಲು ಅವರಿಂದ ಭಕ್ತಿಸಂಗೀತ, ತೇಜಕುಮಾರಿ ಅವರಿಂದ ಮಿಮಿಕ್ರಿ, ಶಾಲಿಕಾ ಎ.ಆರ್ ಅವರಿಂದ ತಮಿಳು ಗಾಯನ, ಮೀರಾ ಕಾಮತ್ ಅವರಿಂದ ಹಾಸ್ಯ ಕವಿತೆ, ವರ್ಷಾಪ್ರವೀಣ್ ಅವರಿಂದ ಭಕ್ತಿಗೀತೆ, ಶಿಲ್ಪಾವಾಶೆ ಅವರಿಂದ ಶಾಸ್ತ್ರೀಯ ಸಂಗೀತ, ಲತೀಶ್ ಅವರಿಂದ ತಬಲಾವಾದನ, ಗೀತಾ ಎಂ. ಭಟ್ ಅವರಿಂದ ಭಾವಗೀತೆ, ಅನುಶ್ರೀ ಕೆ ಅವರಿಂದ ಜಾನಪದ ನೃತ್ಯ, ತೇಜಸ್ವಿನಿ ಕೆ.ಆರ್ ಅವರಿಂದ ಕವಿತಾವಾಚನ, ಕು. ಅಭಿಜ್ಞಾ ಕರಂದಕ್ಕಾಡ್ ಮತ್ತು ಮಾ. ಕೌಸ್ತುಭ್ ಕೆ.ಯು ಅವರಿಂದ ಯೋಗ ಪ್ರದರ್ಶನ ನಡೆಯುವುದು.
22ರಂದು ರಂಗ ಚಿನ್ನಾರಿ ಮಹಿಳಾ ಘಟಕದಿಂದ 'ನಾರಿ ಚಿನ್ನಾರಿ ಸಂಸ್ಕøತಿ ಕಲರವ'
0
ಜನವರಿ 19, 2023