ಕಾಸರಗೋಡು: ವಿವಿಧ ವಲಯಗಳಲ್ಲಿ ಶಿಕ್ಷಣ ಪಡೆದು ಉದ್ಯೋಗರಹಿತರಾಗಿರುವ ಅಬ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ "ಸ್ಪೆಕ್ಟ್ರಮ್-ಉದ್ಯೋಗ ಮೇಳ 2023" ಅನ್ನು ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಕೈಗಾರಿಕಾ ತರಬೇತಿ ಇಲಾಖೆಯ ಅಧೀನದಲ್ಲಿ ಆಯೋಜಿಸಲಾಗಿದೆ. ಕಾಸರಗೋಡು ಜಿಲ್ಲಾ ಉದ್ಯೋಗ ಮೇಳ ಜ.23ರಂದು ಬೆಳಗ್ಗೆ 9ರಿಂದ ಕಾಸರಗೋಡು ಸರ್ಕಾರಿ ಐಟಿಐನಲ್ಲಿ ನಡೆಯಲಿರುವುದಾಗಿ ಐಟಿಐ ಕಾಸರಗೋಡು ಪ್ರಾಂಶುಪಾಲ ಮಧುಸೂದನನ್ ಜಿ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮೇಳ ಉದ್ಘಾಟಿಸುವರು. ಕಾಸರಗೋಡು ನಗರಸಭಾ ಸದಸ್ಯೆ ಅಸ್ಮಾ ಮಹಮ್ಮದ್ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ 9 ಸರ್ಕಾರಿ ಐ.ಟಿ.ಐ, 3ಎಸ್‍ಇಇಡಿಡಿ ಐ.ಟಿ.ಐಗಳಿಮದ ಪ್ರತಿ ವರ್ಷ 1200ರಷ್ಟು ಅಭ್ಯರ್ಥಿಗಳು ಶಿಕ್ಷಣ ಪಡೆದು ಹೊರಬರುತ್ತಿದ್ದು, ಇಂತಹ ಅಭ್ಯರ್ಥಿಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಎಲ್ & ಟಿ, ಬ್ರಿಟ್ಕೊ, ಶ್ರೀನಿವಾಸ್ ಟೆಕ್ನಾಲಜಿ ಸೇರಿದಂತೆ ಸುಮಾರು 60 ಕಂಪನಿಗಳು ಮೇಳದಲ್ಲಿ ಭಾಗವಹಿಸುತ್ತವೆ. ಉದ್ಯೋಗ ಮೇಳದಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ಡಿಡಬ್ಲ್ಯೂಎಂಎಸ್ ಕನೆಕ್ಟ್ ಅಪ್ಲಿಕೇಶನ್ ಅಥವಾ ವೆಬ್‍ಸೈಟ್ ತಿತಿತಿ.ಞಟಿoತಿಟeಜgeಡಿmissioಟಿ.ಞeಡಿಚಿಟಚಿ.gov.iಟಿ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್-ಸೈಟ್ ನೋಂದಣಿ ಸೌಲಭ್ಯವು ಜನವರಿ 23 ರಂದು ಬೆಳಿಗ್ಗೆ 9 ಗಂಟೆಗೆ ಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೈಯೂರು ಐಟಿಐ ಪ್ರಾಂಶುಪಾಲ ಶೈನ್ ಕುಮಾರ್ ಜಿ, ಮಡಿಕೈ ಐಟಿಐ ಪ್ರಾಂಶುಪಾಲ ಮಧು ಟಿ.ಪಿ, ದಿನಿಲ್ ಕುಮಾರ್ ಎಂ.ಆರ್ ಮತ್ತು ಜ್ಯೋತಿ. ಕೆ ಉಪಸ್ಥಿತರಿದ್ದರು.
23ರಂದು ಕಾಸರಗೋಡು ಐಟಿಐನಲ್ಲಿ "ಸ್ಪೆಕ್ಟ್ರಮ್-ಉದ್ಯೋಗ ಮೇಳ 2023"
0
ಜನವರಿ 20, 2023
Tags