ನವದೆಹಲಿ: 'ತಂತ್ರಜ್ಞಾನದ ಬಳಕೆ ಮತ್ತು ಚುನಾವಣೆಯ ಸಮಗ್ರತೆ' ವಿಚಾರವಾಗಿ ಕೇಂದ್ರ ಚುನಾವಣಾ ಆಯೋಗವು ಹಮ್ಮಿಕೊಂಡಿರುವ ಎರಡನೇ ಅಂತರರಾಷ್ಟ್ರೀಯ ಸಮಾವೇಶವು ಸೋಮವಾರದಿಂದ ಇಲ್ಲಿ ಆರಂಭವಾಗಲಿದೆ.
ಎರಡು ದಿನಗಳ ಸಮಾವೇಶವನ್ನು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಉದ್ಘಾಟಿಸುವರು ಎಂದು ಆಯೋಗವು ಹೇಳಿಕೆಯಲ್ಲಿ ತಿಳಿಸಿದೆ.