ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ 24ತಾಸುಗಳ ಏಕಾಹ ಭಜನೆಗೆ ಚಾಲನೆ
0
ಜನವರಿ 15, 2023
ಕಾಸರಗೋಡು: ನಗರದ ಶ್ರೀರಾಮಪೇಟೆಯ ಶ್ರೀ ವರದರಾಜ ವೆಂಕಟ್ರಮಣ ದೇವಸ್ಥಾನದಲ್ಲಿ ಶ್ರೀಕೋದಂಡರಾಮ ದೇವರ ಮೂಲ ಪ್ರತಿಷ್ಠೆ ನಡೆದು 250ವರ್ಷ ಸಂದ ಹಿನ್ನೆಲೆಯಲ್ಲಿ ಪ್ರತಿಷ್ಠಾ ಆಚರಣಾ ಮಹೋತ್ಸವ ಪೂರ್ವಭಾವಿಯಾಗಿ 24 ತಾಸುಗಳ ಏಕಾಹ ಭಜನೆ ಭಾನುವಾರ ದೇವಸ್ಥಾನದಲ್ಲಿ ಆರಂಭಗೊಂಡಿತು.
ಬೆಳಗ್ಗೆ ದೇವಸ್ಥಾನದ ಮುಖ್ಯ ಅರ್ಚಕ ವೇದವ್ಯಾಸ ಭಟ್ ದೀಪ ಪ್ರಜ್ವಲನಗೊಳಿಸುವ ಮೂಲಕ ಏಕಾಹಭಜನೆಗೆ ಚಾಲನೆ ನೀಡಿದರು. ನಂತರ ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. ಈ ಸಂದರ್ಭ ಶ್ರೀರಾಮಪೇಟೆಯ ರಾಮವಾಡಿ ಪ್ರದೇಶದಿಂದ ಹಸಿರುವಾಣಿ ಮೆರವಣಿಗೆ ದೇವಸ್ಥಾನಕ್ಕೆ ತಲುಪಿ, ನಂತರ ಉಗ್ರಾಣ ಪೂಜೆ ನಡೆಯಿತು. ಜ.19ರಿಂದ ಫೆ. 2ರ ವರೆಗೆ ವಿವಿಧ ಧಾರ್ಮಿಕ, ವೈದಿಕ ಕಾರ್ಯಕ್ರಮ ನಡೆಯಲಿರುವುದು. ಜ. 30ರಂದು ದೇವಸ್ಥಾನಕ್ಕೆ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಪಾದಂಗಳವರು ಚಿತ್ತೈಸಲಿದ್ದಾರೆ.
Tags