ಇಡುಕ್ಕಿ: 12 ವರ್ಷಕ್ಕೊಮ್ಮೆ ಅರಳುವ ಅಪೂರ್ವ ನೀಲಕುರಿಂಜಿಯನ್ನು ಸಂರಕ್ಷಿತ ಸಸ್ಯ ಎಂದು ಘೋಷಿಸಲಾಗಿದೆ. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಈ ಘೋಷಣೆ ಮಾಡಿದೆ. ಇದರೊಂದಿಗೆ, ಕೇಂದ್ರ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಕುರಿಂಜಿ ಗಿಡಗಳನ್ನು ಕಿತ್ತು ನಾಶಪಡಿಸುವುದು ಅಪರಾಧವಾಗಿದೆ. ಕಾನೂನು ಉಲ್ಲಂಘಿಸುವವರನ್ನು ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಬಂಧಿಸಲಾಗುವುದು. ಪುನರಾವರ್ತಿತ ಅಪರಾಧಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ. ದಂಡ, ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ.ದಂಡ ವಿಧಿಸಲಾಗುವುದು. ನೀಲಕುರಿಂಜಿಯನ್ನು ಬೆಳೆಸುವುದು ಮತ್ತು ಸ್ವಾಧೀನಪಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ನೀಲಕುರಿಂಜಿಯನ್ನು ಸಂರಕ್ಷಿತ ಸಸ್ಯಗಳ ಶೆಡ್ಯೂಲ್ 3 ರಲ್ಲಿ ಪಟ್ಟಿಮಾಡಲಾಗಿದೆ. ಈ ಹಿಂದೆ ದೇಶದಲ್ಲಿ ಕೇವಲ ಆರು ಸಸ್ಯಗಳು ಮಾತ್ರ ಸಂರಕ್ಷಿತ ಸಸ್ಯಗಳ ಪಟ್ಟಿಯಲ್ಲಿದ್ದವು. ಹೊಸ ಪ್ರಕಟಣೆಯಲ್ಲಿ, ನೀಲಕುರಿಂಜಿ ಸೇರಿದಂತೆ ಸಸ್ಯಗಳನ್ನು ಸಹ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರೊಂದಿಗೆ ಸಂರಕ್ಷಿತ ಸಸ್ಯಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ಇವುಗಳಲ್ಲಿ ನೀಲಕುರಿಂಜಿ ಮೊದಲ ಸ್ಥಾನದಲ್ಲಿದೆ. ನೀಲಕುರಿಂಜಿ ಪಶ್ಚಿಮ ಘಟ್ಟಗಳಿಗೆ ಸೇರಿದ ಮುನ್ನಾರ್, ತಮಿಳುನಾಡು, ಕರ್ನಾಟಕ ಮತ್ತು ಗೋವಾದಲ್ಲಿ ಮಾತ್ರ ಕಂಡುಬರುವ ಪೆÇದೆಸಸ್ಯವಾಗಿದೆ. ವೈಜ್ಞಾನಿಕ ಹೆಸರು 'ಸ್ಟ್ರೋಬಿಲಾಂತಸ್ ಕುಂತಿಯಾನಾ' ಎಂದಾಗಿದೆ.
ಮುನ್ನಾರ್ ಪ್ರದೇಶದಲ್ಲಿ ನೀಲಕುರಿಂಜಿ ಹೆಚ್ಚು ಅರಳುತ್ತದೆ. ಇಲ್ಲಿರುವ ಇರವಿಕುಳಂ ರಾಷ್ಟ್ರೀಯ ಉದ್ಯಾನವನವು ಕುರಿಂಜಿ ಮರಗಳಿಗೆ ಹೆಸರುವಾಸಿಯಾಗಿದೆ. ನೀಲಕುರಿಂಜಿಯಲ್ಲಿ ಸುಮಾರು 450 ಜಾತಿಗಳಿವೆ. ಇವುಗಳಲ್ಲಿ 40 ಪ್ರತಿಶತ ಭಾರತದಲ್ಲಿವೆ. ಪಶ್ಚಿಮ ಘಟ್ಟಗಳಲ್ಲೇ 64 ಬಗೆಯ ಕುರಿಂಜಿಗಳಿವೆ ಎಂದು ಅಧ್ಯಯನಗಳನ್ನು ಉಲ್ಲೇಖಿಸಿ ವರದಿ ಹೇಳಿದೆ. ಕುರಿಂಜಿ ವಸಂತವನ್ನು ಆನಂದಿಸಲು ಅನೇಕ ಪ್ರವಾಸಿಗರು ಮುನ್ನಾರ್‍ಗೆ ಬರುತ್ತಾರೆ.
ನೀಲಕುರಿಂಜಿ ಇನ್ನು ಸಂರಕ್ಷಿತ ಸಸ್ಯ: ತಪ್ಪಿದಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ದಂಡ
0
ಜನವರಿ 14, 2023