ಕಾಸರಗೋಡು: ಸಂಗೀತ ಹಾಗೂ ಕಲಾಶಾಲೆಗಳು ಸಾಂಸ್ಕøತಿಕತೆಯನ್ನು ಉಳಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಸನಾತನ ಧÀರ್ಮದಲ್ಲಿ ಸಂಗೀತ ಕಲಾಪ್ರಾಕಾರವು ಅತ್ಯಂತ ಮೇಲ್ಮಟ್ಟದಲ್ಲಿ ತನ್ನದೇ ಆದ ಸೇವೆಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಕಾಸರಗೋಡಿನಲ್ಲಿ ಗೋಪಾಲಕೃಷ್ಣ ಸಂಗೀತ ಶಾಲೆಯು ಈಗಾಗಲೇ ಅನೇಕ ಕಲಾವಿದರನ್ನು ಸೃಷ್ಟಿಸಿದ್ದು ಇವರ ಮೂಲಕ ಇನ್ನಷ್ಟು ಸಾಧನೆ ಆಗಲಿ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಭಾನುವಾರ ಕಾಸರಗೋಡು ಲಲಿತಕಲಾಸದನದಲ್ಲಿ ಜರಗಿದ ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 26ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ದೀಪಬೆಳಗಿಸಿ ಅವರು ಆಶೀರ್ವಚನವನ್ನು ನೀಡಿದರು.
ಸಂಗೀತಪೂರ್ಣಶ್ರೀ ವಿದ್ವಾನ್ ಟಿ.ಪಿ. ಶ್ರೀನಿವಾಸನ್ ಕಾಞಂಗಾಡು ಸಭಾಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ಒಂದು ಸಂಗೀತ ಶಾಲೆಯನ್ನು ನಡೆಸಬೇಕಾದರೆ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ಕಷ್ಟದಲ್ಲಿಯೂ ಗೋಪಾಲಕೃಷ್ಣ ಸಂಗೀತ ಶಾಲೆಯು ಇಂದು ಜಿಲ್ಲೆಯಲ್ಲಿ ಅನೇಕ ಶಿಷ್ಯಂದಿರನ್ನು ಹುಟ್ಟುಹಾಕಿದೆ. ಕೇವಲ ಧನಾರ್ಜನೆಯನ್ನೇ ಉದ್ದೇಶವಾಗಿಟ್ಟುಕೊಂಡು ಈ ಸಂಗೀತಶಾಲೆಯು ನಡೆಯುತ್ತಿಲ್ಲವೆಂಬುದು ಇಲ್ಲ ಗೋಚರವಾಗುತ್ತಿದೆ ಎಂದರು.
ಹಿರಿಯ ಕಲಾವಿದ ಡಾ. ಶಂಕರ್ ರಾಜ್ ಮಾತನಾಡಿದರು. ಸಂಗೀತ ಗುರುಗಳಾದ ಉಷಾ ಈಶ್ವರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಿ.ಜಿ. ಈಶ್ವರ ಭಟ್ ಮಾತನಾಡಿದರು. ಡಾ. ಶಾರ್ವರಿ ಭಟ್ ಸ್ವಾಗತಿಸಿ ನಿರೂಪಣೆಗೈದರು, ನಿವೃತ್ತ ಅಧ್ಯಾಪಕ ಶಿವರಾಮ ಪಿ.ವಿ. ವಂದಿಸಿದರು.
ನಂತರ ವಿದ್ಯಾರ್ಥಿಗಳಿಂದ ಸಂಗೀತೋಪಾಸನೆ ಜರಗಿತು. ವಯಲಿನ್‍ನಲ್ಲಿ ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಾಲರಾಜ್ ಬೆದ್ರಡಿ, ಡಾ. ಮಾಯಾ ಮಲ್ಯ ಕಾಸರಗೋಡು, ಮೃದಂಗದಲ್ಲಿ ವಿದ್ವಾನ್ ಕೋವೈ ಕಣ್ಣನ್ ಕಾಞಂಗಾಡು, ವಿದ್ವಾನ್ ರಾಜೀವ್ ವೆಳ್ಳಿಕ್ಕೋತ್, ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಕೌಶಿಕ್ ರಾಮಕೃಷ್ಣನ್ ಜೊತೆಗೂಡಿದರು. ಸಂಜೆ ವಿದುಷಿ ಡಾ. ಎನ್.ಜೆ. ನಂದಿನಿ ತಿರುವನಂತಪುರ ಅವರಿಂದ ಪ್ರಧಾನ ಕಚೇರಿ ಜರಗಿತು. ವಯಲಿನ್‍ನಲ್ಲಿ ವಿದ್ವಾನ್ ಆಲಕ್ಕೋಡ್ ವಿ.ಎಸ್.ಗೋಕುಲ್, ಮೃದಂಗದಲ್ಲಿ ವಿದ್ವಾನ್ ಕೆ.ಬಿ. ಗಣೇಶ್ ಅಯ್ಯರ್ ಬೋಂಬೇ, ಘಟಂನಲ್ಲಿ ವಿದ್ವಾನ್ ಶ್ರೀಜಿತ್ ವೆಳ್ಳತ್ತಂಜೂರು ಜೊತೆಗೂಡಿ ಕಲಾರಸಿಕರ ಮನಸೂರೆಗೊಂಡರು. ಡಾ. ಜಯಶ್ರೀ ನಾಗರಾಜ್ ಕಲಾವಿದರನ್ನು ಪರಿಚಯಿಸಿದರು.
ಸಂಸ್ಕøತಿಯ ಉಳಿವಿಗೆ ಸಂಗೀತ ಶಾಲೆಗಳ ಕೊಡುಗೆಯಿದೆ: ಎಡನೀರು ಶ್ರೀ: ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆಯ 26ನೇ ವಾರ್ಷಿಕೋತ್ಸವ
0
ಜನವರಿ 16, 2023