ಭೋಪಾಲ್ : ದೇಶದಲ್ಲಿ ಪ್ರಥಮ ಬಾರಿಗೆ ಭಾರತ್ ಬಯೋಟೆಕ್‌ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್‌ಕೋವಾಕ್ (ಮೂಗಿನ ಮೂಲಕ ಲಸಿಕೆ) ಇದೇ ತಿಂಗಳ 26 ರಂದು ಬಿಡುಗಡೆಯಾಗಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲ್ಲ ಶನಿವಾರ ತಿಳಿಸಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎಲಾ, ಜಾನುವಾರುಗಳಲ್ಲಿನ ಚರ್ಮ ಗಂಟು ಕಾಯಿಲೆಯ ಲಸಿಕೆ, ಲುಂಪಿ-ಪ್ರೊವಾಕ್‌ಇಂಡ್ ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದರು.
ಮೂಗಿನ ಮೂಲಕ ನೀಡಲಾಗುವ ಲಸಿಕೆಯನ್ನು ಜನವರಿ 26 ರಂದು ಗಣರಾಜ್ಯ ದಿನದಂದು ಅಧಿಕೃತವಾಗಿ ಆರಂಭಿಸಲಾಗುವುದು ಎಂದು ಅವರು ತಿಳಿಸಿದರು. ಜನವರಿ 26 ರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೂ. 325 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ800 ರೂಪಾಯಿಗೆ ಈ ಲಸಿಕೆ ಲಭ್ಯವಿರಲಿದೆ.
ಕೋವಿನ್ ಅಪ್ಲಿಕೇಷನ್ ನಲ್ಲಿ ಈಗಾಗಲೇ iNCOVACC ಎಂಟ್ರಿಯಾಗಿದ್ದು, 18 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರು ಈ ಲಸಿಕೆಯನ್ನು ಪಡೆಯಬಹುದಾಗಿದೆ. ಆದ್ರೆ ಅವರು ಕೋವಾಕ್ಸಿನ್ ಮತ್ತು ಕೋವಿಶೀಲ್ಡ್‌ನಂತಹ ಎರಡು ಡೋಸ್‌ಗಳ ಲಸಿಕೆಗಳನ್ನು ಮೊದಲೇ ಪಡೆದಿರಬೇಕಾಗುತ್ತದೆ.