HEALTH TIPS

ಜ. 27, 28ರಂದು ಫಿಶ್‌ ಫೆಸ್ಟಿವಲ್‌

 

        ಮಂಗಳೂರು : ಇಲ್ಲಿನ ಮೀನುಗಾರಿಕೆ ಕಾಲೇಜು, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಮೀನುಗಾರಿಕೆ ಕಾಲೇಜಿನ ಆವರಣದಲ್ಲಿ ಜ. 27 ಹಾಗೂ 28ರಂದು ಬೆಳಗ್ಗೆ 10ರಿಂದ ಸಂಜೆಯ ವರೆಗೆ ಫಿಶ್‌ ಫೆಸ್ಟಿವಲ್‌-2023 (ಮೀನು ಉತ್ಸವ) ಆಯೋಜಿಸಲಾಗಿದೆ.

                  ಕಾರ್ಯಕ್ರಮವನ್ನು ಮೀನುಗಾರಿಕೆ ಕಾಲೇಜಿನ ಆವರಣದಲ್ಲಿ ಜ. 27ರ ಸಂಜೆ 5 ಗಂಟೆಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಉದ್ಘಾಟಿಸುವರು.

             ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಕೆ.ಸಿ. ವೀರಣ್ಣ, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸುವರ್ಣ, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿ.ವಿ.ಯ ವಿಸ್ತರಣ ನಿರ್ದೇಶಕ ಡಾ| ಎನ್‌.ಎ. ಪಾಟೀಲ್‌, ಕರ್ನಾಟಕ ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಮಂಗಳೂರು ಮೀನುಗಾರಿಕೆ ಕಾಲೇಜಿನ ಡೀನ್‌ ಡಾ| ಶಿವಕುಮಾರ್‌ ಮಗದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries