ಕಾಸರಗೋಡು: ಪಯಸ್ವಿನಿ ನದಿ ದಡದ ಕೊರಕ್ಕೋಡು ನಾಗರಕಟ್ಟೆಯ ಹೊನ್ನೆಮೂಲೆಯ ಶಿವಸಾನ್ನಿಧ್ಯವಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಜ. 27ರಿಂದ ಫೆ. 2ರ ವರೆಗೆ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿರುವುದಾಗಿ ಸಮಿತಿ ಕಾರ್ಯಾಧ್ಯಕ್ಷ ಕೆ.ಎನ್ ವೆಂಕಟ್ರಮಣ ಹೊಳ್ಳ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 16ನೇ ಶತಮಾನದಲ್ಲಿ ಕೆಳದಿ ರಾಜರ ಆಳ್ವಿಕೆ ಕಾಲದಲ್ಲೇ ಇಲ್ಲಿ ದೇವಸ್ಥಾನವೊಂದು ಅಸ್ತಿತ್ವದಲ್ಲಿದ್ದು, ಇದು ಕಾಸರಗೋಡಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೂಲಸ್ಥಾನವೆಂದು ಐತಿಹ್ಯವಿದೆ.
ಹಲವಾರು ವರ್ಷಗಳಿಂದ ನಾಮಾವಶೇಷಗೊಂಡ ಸ್ಥಿತಿಯಲ್ಲಿದ್ದ ದೇವಸ್ಥಾನದ ಬಗ್ಗೆ ದೈವಜ್ಞರ ಮೂಲಕ ನಡೆದ ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತೆ ಇಲ್ಲಿ ಒಂದು ಸುರಗಿಮರ, ಬಲಿಕಲ್ಲು ಹಾಗೂ ಕೆರೆಯೊಂದು ಅಸ್ತಿತ್ವದಲ್ಲಿರುವುದನ್ನು ಪತ್ತೆಮಾಡಲಾಗಿದೆ. 2020 ಫೆ. 20ರಂದು ಎಡನೀರಿನ ಅಂದಿನ ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸವಾಮೀಜಿ ಅವರು ಶಿಲಾನ್ಯಾಸ ನಡೆಸಿದ್ದು, ಸುಮಾರು ಒಂದೂಕಾಲು ಕೋಟಿ ವೆಚ್ಚದಲ್ಲಿ ಭವ್ಯ ದೇಗುಲ ನಿರ್ಮಿಸಲಾಗಿದೆ. 27ರಂದು ಬೆಳಗ್ಗೆ ಗಣಹೋಮ, ಸಂಜೆ 5ಕ್ಕೆ ಹಸಿರುವಾಣಿ ಸಮರ್ಪಣಾ ಮೆರವಣಿಗೆಯೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಚಾಲನೆ ನೀಡಲಾಗುವುದು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣುಆಸ್ರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿರುವುದು. ವಿವಿಧ ದಿನಗಳಲ್ಲಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಒಡಿಯೂರು ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಕ್ಷೇತ್ರಕ್ಕೆ ಚಿತ್‍ತೈಸಿ ಆಶೀರ್ವಚನ ನೀಡುವರು. ಫೆ. 2ರಂದು ಬೆಳಗ್ಗೆ 8ರಿಂದ 9.10ರ ಮುಹೂರ್ತದಲ್ಲಿ ಶಿವಲಿಂಗ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು. ಎಲ್ಲಾ ದಿವಸ ಧಾರ್ಮಿಕ, ವೈದಿಕ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನಿರಂಜನ ಕೊರಕ್ಕೋಡು, ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲ್, ದಿನೇಶ್ ನಾಗರಕಟ್ಟೆ, ರೋಹಿತಾಕ್ಷ ನಾಗರಕಟ್ಟೆ, ಗೋಪಾಲ ಹೊನ್ನೆಮೂಲೆ ಉಪಸ್ಥಿತರಿದ್ದರು.
ಜ. 27ರಿಂದ ಹೊನ್ನೆಮೂಲೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ
0
ಜನವರಿ 21, 2023