HEALTH TIPS

ಮಂಗಲ್ಪಾಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಆರಂಭ: ಕ್ಲೀನ್ ಕೇರಳ ಕಂಪನಿಯಿಂದ 28.6 ಟನ್ ತ್ಯಾಜ್ಯ ರವಾನೆ


         ಉಪ್ಪಳ: ಕಸದ ಸಮಸ್ಯೆ ತೀವ್ರವಾಗಿರುವ ಮಂಗಲ್ಪಾಡಿ ಪಂಚಾಯತಿಯಲ್ಲಿ ಕ್ಲೀನ್ ಕೇರಳ ಕಂಪನಿ ನೇತೃತ್ವದಲ್ಲಿ ಕಸ ತೆಗೆಯುವ ಕಾರ್ಯ ಆರಂಭವಾಗಿದೆ. ಉಪ್ಪಳ ಮಾರುಕಟ್ಟೆ ಬಳಿ ರಾಶಿ ಬಿದ್ದಿದ್ದ 28.6 ಟನ್ ಕಸ ತೆಗೆಯಲಾಯಿತು. ಉಳಿದವುಗಳನ್ನು ಮಂಗಳವಾರದಿಂದ ತೆಗೆದುಹಾಕಲಾಗುತ್ತದೆ. ಎರಡು ಟೋರಸ್ ವಾಹನಗಳಲ್ಲಿ ಸಂಸ್ಕರಣೆಗಾಗಿ ಕೊಚ್ಚಿಗೆ ಕಸವನ್ನು ಕೊಂಡೊಯ್ಯಲಾಯಿತು. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿಯಮಗಳ ಪ್ರಕಾರ ತ್ಯಾಜ್ಯವನ್ನು ತೆಗೆದು ಸಂಸ್ಕರಣೆಗೆ ಸಾಗಿಸಲಾಗುತ್ತದೆ. ಜಿಲ್ಲಾ ಸಮನ್ವಯ ಸಮಿತಿ ಹಾಗೂ ಮಂಗಲ್ಪಾಡಿ ಪಂಚಾಯತಿ ನಿರ್ಣಯದ ಮೇರೆಗೆ ಕಸ ತೆಗೆಯಲು ಆರಂಭಿಸಲಾಗಿದೆ. ಉಪ್ಪಳ ಮಾರುಕಟ್ಟೆ, ಉಪ್ಪಳ-ಕೈಕಂಬ ಹೆದ್ದಾರಿ, ಕೈಕಂಬ ಹೆದ್ದಾರಿಯಿಂದ ಅನತಿ ದೂರದ ಒಳನಾಡು, ಬಂದ್ಯೋಡು ಗಳಲ್ಲಿ ಕಸದ ರಾಶಿ ಬಿದ್ದಿದೆ. ಒಂದು ವಾರದಲ್ಲಿ ಕಸ ವಿಲೇವಾರಿ ಪೂರ್ತಿಗೊಳ್ಳುವುದು ಎಂದು ಕ್ಲೀನ್ ಕೇರಳ ಕಂಪನಿ ಜಿಲ್ಲಾ ವ್ಯವಸ್ಥಾಪಕ ಮಿಥುನ್ ಗೋಪಿ ತಿಳಿಸಿದ್ದಾರೆ.
          ಪಂಚಾಯಿತಿ ವ್ಯಾಪ್ತಿಯ ಇತರೆ ಪ್ರದೇಶಗಳಲ್ಲಿ ಕಸ ಶೇಖರಣೆಯಾಗುತ್ತಿದ್ದು, ಹಸಿರು ಕ್ರಿಯಾಸೇನೆ ನೇತೃತ್ವದಲ್ಲಿ ಕಸ ತೆಗೆಯುವ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಹಸಿರು ಕ್ರಿಯಾಸೇನೆಯ 26 ಸದಸ್ಯರು ಪಂಚಾಯಿತಿಯಲ್ಲಿ ಸಕ್ರಿಯರಾಗಿದ್ದಾರೆ. ಮಂಗಲ್ಪಾಡಿ ಪಂಚಾಯತಿಯಲ್ಲಿ ಒಟ್ಟು 23 ಮಿನಿ ಎಂಸಿಎಫ್ (ವಸ್ತು ಸಂಗ್ರಹಣಾ ಸೌಲಭ್ಯ) ಸ್ಥಾಪಿಸಲಾಗಿದೆ. ಸಂಗ್ರಹಿಸಿದ ತ್ಯಾಜ್ಯವನ್ನು ಹಸಿರು ಕ್ರಿಯಾಸೇನಾ ಮಿನಿ ಎಂಸಿಎಫ್ ನಲ್ಲಿ ಠೇವಣಿ ಇಡಲಾಗುವುದು. ನಂತರ ಪಂಚಾಯಿತಿಯವರು ವಸೂಲಿ ಮಾಡುತ್ತಾರೆ. ಕುಬಣೂರಿನ ಆರ್‍ಆರ್‍ಎಫ್ (ಸಂಪನ್ಮೂಲ ಮರುಪಡೆಯುವಿಕೆ ಸೌಲಭ್ಯ)ದಲ್ಲೂ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ.
         ಮಂಗಲ್ಪಾಡಿ ಪಂಚಾಯಿತಿಯಲ್ಲಿ ಉಂಟಾಗಿರುವ ಕಸದ ಸಮಸ್ಯೆ ಪರಿಹರಿಸಲು ಪಂಚಾಯಿತಿಯು ತುರ್ತಾಗಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಬೇಕು ಎಂದು ಈ ಹಿಂದೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾರದ ಮುರಳೀಧರನ್ ನೇತೃತ್ವದಲ್ಲಿ ನಡೆದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಸವನ್ನು ಸ್ಥಳಾಂತರಿಸಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲಾ ನೈರ್ಮಲ್ಯ ಮಿಷನ್, ಹಸಿರು ಕೇರಳ ಮಿಷನ್ ಮತ್ತು ಡಿಡಿಪಿ ಮೇಲ್ವಿಚಾರಣೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಮಾಸ್ಟರ್ ಪ್ಲಾನ್ ತಯಾರಿಸಲಾಗಿದೆ.

                ಜನವರಿ 19 ರಂದು ಸಭೆ:
          ಮಂಗಲ್ಪಾಡಿ ಪಂಚಾಯಿತಿಯಲ್ಲಿ ಕಸ ತೆಗೆಯುವ ಸಂಬಂಧ ಹಸಿರು ಕ್ರಿಯಾಸೇನೆಗಳ ಚಟುವಟಿಕೆಗಳ ಕುರಿತು ಚರ್ಚಿಸಲು ಜ.19ರಂದು ಬೆಳಗ್ಗೆ 10.30ಕ್ಕೆ ಪಂಚಾಯಿತಿ ಕಚೇರಿಯಲ್ಲಿ ಸಭೆ ನಡೆಯಲಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಮೊದಲಾದವರು ಭಾಗವಹಿಸುವರು ಎಂದು ತಿಳಿಸಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries