ಕಾಸರಗೋಡು: ಜಿಲ್ಲೆಯ 38 ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಷಿಕ ಯೋಜನೆ ತಿದ್ದುಪಡಿಗೆ ಜಿಲ್ಲಾ ಯೋಜನಾ ಸಮಿತಿ ಸಭೆ ಅನುಮೋದನೆ ನೀಡಿತು. ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಜಿಲ್ಲಾ ಯೋಜನಾ ಸಮಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ವಹಿಸಿದ್ದರು. ಹದಿನಾಲ್ಕನೇ ಪಂಚವಾರ್ಷಿಕ ಯೋಜನೆಯ ಪ್ರಮುಖ ಉದ್ದೇಶಗಳನ್ನು ಸಾಧಿಸಲು ಎರಡನೇ ವಾರ್ಷಿಕ ಯೋಜನೆಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಆದ್ಯತೆಯ ಪ್ರಸ್ತಾವನೆಗಳನ್ನು ಚರ್ಚಿಸಲಾಯಿತು. ಅಲ್ಲದೆ ನವಕೇರಳಂ ಕ್ರಿಯಾ ಯೋಜನೆ ಅಭಿಯಾನದ ಅನುಷ್ಠಾನದ ಕುರಿತು ಪ್ರಸ್ತುತಿ ಮಾಡಲಾಯಿತು. ಪೀಪಲ್ಸ್ ಬಯೋಡೈವರ್ಸಿಟಿ ರಿಜಿಸ್ಟರ್ ಭಾಗ 2ಮಾರ್ಗಸೂಚಿಗಳಿಗೆ ಸಂಬಂಧಿಸಿದ ವಿಷಯಗಳು ಮತ್ತು ವಿಪತ್ತು ನಿರ್ವಹಣಾ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ನೀಲೇಶ್ವರ ಬ್ಲಾಕ್ ಪಂಚಾಯಿತಿಯಲ್ಲಿ 10 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. 48 ಯೋಜನೆಗಳಿಗೆ ತಿದ್ದುಪಡಿ ತರಲಾಗುವುದು. ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ 7 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕಾಞಂಗಾಡ್ ಬ್ಲಾಕ್ 12, ಕಲ್ಲಾರ್ ಪಂಚಾಯತ್ 17, ವಲಿಯಪರಂ ಗ್ರಾಮ ಪಂಚಾಯತ್ 18, ಮೊಗ್ರಾಲ್ ಪುತ್ತೂರು 16, ಬೆಳ್ಳೂರು ಪಂಚಾಯತ್ 17, ಪಳ್ಳೆಕ್ಕೆರೆ 27, ನೀಲೇಶ್ವರ ನಗರಸಭೆ 27, ಕಾರಡ್ಕ 21, ಪೈವಳಿಕೆ 21, ಕಾಞಂಗಾಡ್, ಚೆಮ್ಮನಾಡ್ ನಗರಸಭೆ ವ್ಯಾಪ್ತಿ 21, ಹೊಸ ಯೋಜನೆಗಳಿಗೆ ಸಭೆ ಅನುಮೋದನೆ ನೀಡಿದೆ. ಕುಂಬ್ಡಾಜೆ, ಕಯ್ಯೂರು-ಚಿಮೇನಿ ಪಂಚಾಯಿತಿಗಳ 9 ಹೊಸ ಯೋಜನೆಗಳಿಗೆ, ಬದಿಯಡ್ಕ 49, ಕಾಸರಗೋಡು ನಗರಸಭೆ 26, ಮಡಿಕೈ 10, ಕಾಸರಗೋಡು ಬ್ಲಾಕ್ 11, ಎಣ್ಮ್ಮಕಜೆ 21, ಅಜನೂರು 16, ಚೆಂಗಳ 19, ಮುಳಿಯಾರ್ 8, ಬಳಾಲ್ 8, ತೃಕರಿಪುರ 11, ಮಂಜೇಶ್ವರ 18, ವರ್ಕಾಡಿ 11, ಪುತ್ತಿಗೆ 16, ಕಾರಡ್ಕ 5, ಮೀಂಜ 3, ಪುಲ್ಲೂರು ಪೆರಿಯ 22, ಕೋಡೋಂ ಬೆಳ್ಳೂರ್ 30 ಮತ್ತು ಉದುಮ 32 ಹೊಸ ಯೋಜನೆಗಳಿಗೂ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಯೋಜನಾ ಸಮಿತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಯೋಜನಾಧಿಕಾರಿ ಎ.ಎಸ್.ಮಾಯಾ, ಯೋಜನಾ ಸಮಿತಿ ಸದಸ್ಯರಾದ ಶಾನವಾಸ್ ಪಾದೂರು, ಅಡ್ವ.ಸಿ.ರಾಮಚಂದ್ರನ್, ಜಾಸ್ಮಿನ್ ಕಬೀರ್, ನಜ್ಮಾ ರಫಿ, ವಿವಿಧ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
38 ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಷಿಕ ಯೋಜನೆ ತಿದ್ದುಪಡಿಗೆ ಅನುಮೋದನೆ: ಜಿಲ್ಲಾ ಯೋಜನಾ ಸಮಿತಿ ಸಭೆ ತೀರ್ಮಾನ
0
ಜನವರಿ 21, 2023