ಶ್ರೀನಗರ: ಖ್ಯಾತ ನವೋದ್ಯಮಿ ಸೋನಂ ವಾಂಗ್‌ಚುಕ್ ಅವರನ್ನು ಲಡಾಖ್ ಆಡಳಿತ ಗೃಹಬಂಧನದಲ್ಲಿಟ್ಟಿದೆ. ಈ ಬಗ್ಗೆ ಸ್ವತಃ 3 ಈಡಿಯಟ್ಸ್‌ನ 'ಫಂಗ್‌ಸುಕ್ ವಾಂಗ್ಡು' ನೀಡಿದ್ದಾರೆ.
ಈ ಬಗ್ಗೆ ಯೂಟ್ಯೂಬ್ ವಿಡಿಯೋ ಬಿಡುಗಡೆ ಮಾಡಿರುವ ಸೋನಂ ವಾಂಗ್‌ಚುಕ್, ಇದು ವಾಕ್ ಸ್ವಾತಂತ್ರ್ಯ ದಮನಿಸುವ ಕಾರ್ಯವಾಗಿದೆ. ಇನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಧ್ಯಪ್ರದೇಶಿಸಿ ಲಡಾಖ್ ಅಭಿವೃದ್ಧಿಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಜನರು ತಮ್ಮ ಕಾರ್ಬನ್-ತೀವ್ರ ಜೀವನಶೈಲಿಯನ್ನು ಬದಲಾಯಿಸುವಂತೆ ಒತ್ತಾಯಿಸುವುದರ ಜೊತೆಗೆ, ಈ ಪ್ರದೇಶಕ್ಕಾಗಿ ಸಂವಿಧಾನದ 6ನೇ ಶೆಡ್ಯೂಲ್ ಮತ್ತು ಇತರ ರಕ್ಷಣೆಗಳನ್ನು ಒತ್ತಾಯಿಸಿ ಸೋನಮ್ ಐದು ದಿನಗಳ ಉಪವಾಸವನ್ನು ನಡೆಸುತ್ತಿದ್ದಾರೆ. ಇಲ್ಲಿ ಕತ್ತಲ ನಗರವಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿದ ಅವರು ಸದ್ಯದ ಪರಿಸ್ಥಿತಿಯಿಂದಾಗಿ ಮುಂದಿನ ದಿನಗಳಲ್ಲಿ ಲೇಹ್-ಲಡಾಖ್ ಜನರು ಭಯೋತ್ಪಾದನೆಯ ಹಾದಿ ಹಿಡಿಯಬಹುದು ಎಂದು ಸೋನಂ ಆತಂಕ ವ್ಯಕ್ತಪಡಿಸಿದ್ದಾರೆ.
2009ರ ಬಾಲಿವುಡ್ ಚಲನಚಿತ್ರ 3 ಈಡಿಯಟ್ಸ್ ನ ಸೋನಂ ವಾಂಗ್‌ಚುಕ್ ಪಾತರ್ ಬಹಳ ಜನಪ್ರಿಯವಾಯಿತು. ಅವರು ಗಣರಾಜ್ಯೋತ್ಸವದಂದು ಲಡಾಖ್‌ನಲ್ಲಿರುವ ತಮ್ಮ ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್‌ನ ಟೆರೇಸ್‌ನಲ್ಲಿ ತಮ್ಮ 5 ದಿನಗಳ ಉಪವಾಸವನ್ನು ಪ್ರಾರಂಭಿಸಿದರು. ಈ ದಿನಗಳಲ್ಲಿ ಈ ಪ್ರದೇಶದಲ್ಲಿ ಮೈನಸ್ 20 ಡಿಗ್ರಿ ತಾಪಮಾನವಿದೆ. ಲಡಾಖ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎಂದು ಸೋನಂ ಹೇಳಿದ್ದಾರೆ.
ಸಮುದ್ರ ಮಟ್ಟದಿಂದ ಸುಮಾರು 17,852 ಅಡಿ ಎತ್ತರದಲ್ಲಿರುವ ಖರ್ದುಂಗ್ಲಾ ಪಾಸ್‌ಗೆ ಹೋಗಲು ಆಡಳಿತವು ಅವಕಾಶ ನೀಡಲಿಲ್ಲ, ಅಲ್ಲಿ ತನ್ನ ಇತರ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಲು ಯೋಜಿಸಿದ್ದೆ ಎಂದು ಸೋನಮ್ ಹೇಳಿದರು. ಪ್ರದೇಶಕ್ಕೆ ಭೂಮಿ, ಪರಿಸರ, ಸಂಸ್ಕೃತಿ ಮತ್ತು ಉದ್ಯೋಗವನ್ನು ರಕ್ಷಿಸಲು ಅವರ ಬೇಡಿಕೆಗಳನ್ನು ಚರ್ಚಿಸಲು ಪ್ರಧಾನ ಮಂತ್ರಿ ತಕ್ಷಣವೇ ಲಡಾಖ್‌ನಾದ್ಯಂತದ ನಾಯಕರನ್ನು ಸಭೆಗೆ ಕರೆಯಬೇಕೆಂದು ಅವರು ಬಯಸುತ್ತಾರೆ.