ಕಾಸರಗೋಡು: ಜಿಲ್ಲಾ ಪಂಚಾಯತ್ ಮಂಡಿಸಿದ 63 ತಿದ್ದುಪಡಿ ಯೋಜನೆಗಳಿಗೆ ಜಿಲ್ಲಾ ಯೋಜನಾ ಸಮಿತಿ ಅಂಗೀಕಾರ ನೀಡಿದೆ. ಜಿಲ್ಲಾ ಪಂಚಾಯಿತಿ 46 ಹೊಸ ಯೋಜನೆಗಳನ್ನು ಪ್ರಸ್ತಾಪಿಸಿದ್ದು, 45 ಯೋಜನೆಗಳನ್ನು ಕೈ ಬಿಡಲಾಗಿದೆ.
'ಲೈಫ್' ವಸತಿ ನಿರ್ಮಾಣ ಯೋಜನೆಯ ಭಾಗವಾಗಿ ಪರಿಶಿಷ್ಟ ಜಾತಿ ಗ್ರಾಮ ಪಂಚಾಯಿತಿಗಳಿಗೆ ಧನ ಸಹಾಯ ನೀಡುವುದು, ಜಿಲ್ಲಾ ಪಂಚಾಯತ್ ಕಛೇರಿ ಕಟ್ಟಡದಲ್ಲಿ ಕುಡಿಯುವ ನೀರಿನ ಸೌಲಭ್ಯ, ಚಟ್ಟಂಚಾಲ್ ಕೈಗಾರಿಕಾ ಪಾರ್ಕ್‍ನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ, ಬಡ್ಸ್ ಶಾಲೆ ನಡೆಸಲು ಗ್ರಾಮ ಪಂಚಾಯತ್ ಗಳಿಗೆ ಧನ ಸಹಾಯ ನೀಡುವುದು, ಜಿ.ಪಂ ಶಾಲೆಗಳಿಗೆ ಲ್ಯಾಪ್‍ಟಾಪ್ ವಿತರಣೆ, ಪ್ರೌಢಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಲ್ಯಾಬ್ ಸೌಲಭ್ಯ ಒದಗಿಸುವುದು, ಕಾಪ್ಪಿಲ್ ಜಲಾಶಯ ನವೀಕರಣ, ಜಿ.ಪಂ ಶಾಲೆಗಳಿಗೆ ವಿದ್ಯುತ್ತೀಕರಣ, ಚಾಯೋತ್ ಜಿ ಎಚ್ ಎಸ್ ಎಸ್‍ನಲ್ಲಿ ಮಾದರಿ ಲ್ಯಾಬ್ ಸ್ಥಾಪನೆ, ಪ್ರೌಢಶಾಲೆಗಳಲ್ಲಿ ಶೀ ಪ್ಯಾಡ್ ಯೋಜನೆ, ಜಿ.ಪಂ ಶಾಲೆಗಳಲ್ಲಿ ಬಯೋ ಗ್ಯಾಸ್ ಪ್ಲಾಂಟ್ ನಿರ್ಮಾಣ, ಜಿಲ್ಲಾ ಅಭಿವೃದ್ಧಿ ಕರಡು ರೇಖೆ ತಯಾರಿಸುವುದು, ವಿಚಾರ ಸಂಕಿರಣ ಏರ್ಪಡಿಸುವುದು ಮೊದಲಾದವುಗಳು ಜಿಲ್ಲಾಪಂಚಾಯಿತಿಯ ನೂತನ ಯೋಜನೆಯಲ್ಲಿ ಒಳಪಡಿಸಲಾಗಿದೆ.
ಕಾಸರಗೋಡು ಜಿಲ್ಲಾ ಪಂಚಾಯಿತಿಗೆ 46 ಹೊಸ ಯೋಜನೆಗಳು
0
ಜನವರಿ 28, 2023
Tags