ಕಾಸರಗೋಡು: ಕೇರಳ ಮಾಧ್ಯಮ ಅಕಾಡೆಮಿ ಗೂಗಲ್ ಸಹಯೋಗದೊಂದಿಗೆ ಮಾಧ್ಯಮ ಕಾರ್ಯಕರ್ತರಿಗೆ ಡೇಟಾ ಜರ್ನಲಿಸಂ ಕುರಿತು ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸುತ್ತದೆ. ಫೆ.4ರಂದು ಕೇರಳ ಮಾಧ್ಯಮ ಅಕಾಡೆಮಿ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಲಿದೆ. ಡೇಟಾ ಜರ್ನಲಿಸಂ ಕ್ಷೇತ್ರದ ತಜ್ಞರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಭಾಗವಹಿಸಲು ಆಸಕ್ತಿ ಹೊಂದಿರುವ ಮಾನ್ಯತೆ ಪಡೆದ ಮಾಧ್ಯಮ ವ್ಯಕ್ತಿಗಳು goo.gಟe/ಜಚಿಣಚಿಜiಚಿಟogue ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಮೊದಲು ನೋಂದಾಯಿಸುವ 30 ಜನರಿಗೆ ಪ್ರವೇಶವನ್ನು ಸೀಮಿತಗೊಳಿಸಲಾಗಿದೆ.
ಫೆಬ್ರವರಿ 4 ರಂದು ಮಾಧ್ಯಮ ಕಾರ್ಯಕರ್ತರಿಗೆ ಡೇಟಾ ಜರ್ನಲಿಸಂ ಕಾರ್ಯಾಗಾರ
0
ಜನವರಿ 19, 2023