ತಿರುವನಂತಪುರಂ: ತೀವ್ರ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಪರಿಸ್ಥಿತಿ ಹದಗೆಡುವ ಸಾಧ್ಯತೆಯಿದ್ದು, ್ಲ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕೇರಳ ಕರಾವಳಿಯಿಂದ ಮೀನುಗಾರಿಕೆಗೆ ತೆರಳಿದ್ದವರೆಲ್ಲರೂ ಕೂಡಲೇ ವಾಪಸ್ ಬರುವಂತೆ ಸೂಚಿಸಲಾಗಿದೆ. ನೈಋತ್ಯ ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಉಂಟಾಗಿದೆ.
ಜನವರಿ 31 ರಿಂದ ಫೆಬ್ರವರಿ 4 ರವರೆಗೆ ಕನ್ಯಾಕುಮಾರಿ ಕರಾವಳಿ, ಮನ್ನಾರ್ ಕೊಲ್ಲಿ, ತಮಿಳುನಾಡು ಕರಾವಳಿ ಮತ್ತು ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಮೀನುಗಾರಿಕೆಗೆ ತೆರಳದಂತೆ ಕೇಂದ್ರ ಹವಾಮಾನ ಇಲಾಖೆ ಸೂಚಿಸಿದೆ.
ಇನ್ನು 5 ದಿನಗಳಲ್ಲಿ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಅಲ್ಲಲ್ಲಿ ಸಾಧಾರಣ ಮಳೆ ಮುನ್ಸೂಚನೆ ಇದೆ. ದಕ್ಷಿಣ ಕೇರಳದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯೂ ಇದೆ.
ತೀವ್ರ ವಾಯುಭಾರ ಕುಸಿತ: ಮುಂದಿನ 5 ದಿನ ಮಳೆ: ಮೀನುಗಾರಿಕೆಗೆ ತೆರಳಿದ್ದವರು ಕೂಡಲೇ ವಾಪಸು ಬರುವಂತೆ ಸೂಚನೆ
0
ಜನವರಿ 31, 2023