HEALTH TIPS

ಮಧುಮೇಹಿಗಳು ಈ 5 ಡಿಟಾಕ್ಸ್ ಪಾನೀಯ ಕುಡಿದರೆ ಸಕ್ಕರೆಯಂಶ ನಿಯಂತ್ರಣದಲ್ಲಿಡಬಹುದು

Top Post Ad

Click to join Samarasasudhi Official Whatsapp Group

Qries

 ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, ವಿಶ್ವದಲ್ಲಿಯೇ ಭಾರತ ಮಧುಮೇಹಿಗಳ ಸಂಖ್ಯೆಯಲ್ಲಿ ನಂ. 1 ಸ್ಥಾನದಲ್ಲಿದೆ. ಈಗಾಗಲೇ 80 ಮಿಲಿಯನ್‌ ಮಧುಮೇಹಿಗಳು ಭಾರತದಲ್ಲಿದ್ದಾರೆ. 2045ರಷ್ಟಿಗೆ 135 ಮಿಲಿಯನ್‌ ತಲುಪಲಿದೆ ಇದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಮಧುಮೇಹ ಮಾರಕಕಾಯಿಲೆಯಲ್ಲ, ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಇದರಿಂದಾಗಿ ಅನೇಕ ಮಾರಕ ಕಾಯಿಲೆಗಳು ಬರುತ್ತದೆ. ಆದ್ದರಿಂದ ಮಧುಮೇಹ ಬಂದ ಮೇಲೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಬೇಕು. ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಆಹಾರಶೈಲಿ, ವ್ಯಾಯಾಮ ಸಹಾಯ ಮಾಡುತ್ತದೆ. ನಾವಿಲ್ಲಿ ಮಧುಮೇಹಿಗಳಿಗೆ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಕೆಲವೊಂದಿ ಡಿಟಾಕ್ಸ್ ಡಯಟ್‌ ಬಗ್ಗೆ ಹೇಳಲಾಗಿದೆ ನೋಡಿ:

1. ತುಂಬಾ ಬಾಯಾರಿಕೆಯಾಗುವುದು
2. ತುಂಬಾ ಹಸಿವು
3. ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುವುದು
4. ತುಂಬಾ ಸುಸ್ತು
5. ಕಣ್ಣುಗಳು ಮಂಕಾಗುವುದು
6. ಗಾಯವಾದರೆ ಬೇಗನೆ ಗುಣಮುಖವಾಗುವುದು

ಮಧುಮೇಹ ಬಂದರೆ ಸಂಪೂರ್ನ ಗುಣಪಡಿಸಲು ಸಾಧ್ಯವಿಲ್ಲ, ಆದರೆ ನಿಯಂತ್ರಣದಲ್ಲಿಡಬೇಕಾಗುತ್ತದೆ. ನಿಯಂತ್ರಣದಲ್ಲಿಡಲು ನೀವು ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಬೇಕಾಗಿದೆ. ಮಾತ್ರೆ ಅಥವಾ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರೆ ಅದರ ಜೊತೆಗೆ ಕೆಲವೊಂದು ಪಾನೀಯಗಳು ನಿಮ್ಮ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಾಯ ಮಾಡಿತ್ತದೆ. ಆ ಪಾನೀಯಗಳಾವುವು ಎಂದು ನೋಡೋನ:

ಮಧುಮೇಹಿಗಳಿಗೆ ಈ ಪಾನೀಯಗಳು ಒಳ್ಳೆಯದು

ತುಳಸಿ ನೀರು

ತುಳಸಿ ನೀರು ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಂಬಾನೇ ಸಹಕಾರಿ ಎಂಬುವುದು ನಿಮಗೆ ಗೊತ್ತೇ? ಮಧುಮೇಹಿಗಳು ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ತುಳಸಿ ನೀರು ಕುಡಿಯುವುದು ಒಳ್ಳೆಯದು. ನೀವೇನು ಮಾಡಬೇಕು ಅಂದರೆ 6-8 ತುಳಸಿ ಎಲೆ ನೀರಿಗೆ ಹಾಕಿ ಕುದಿಸಿ, ಸೋಸಿ ಆ ನೀರನ್ನು ಬಿಸಿ ಇರುವಾಗ ಅಥವಾ ಆರಿದ ಮೇಲೆ ಕುಡಿಯಬಹುದು.

ಶುಂಠಿ ನೀರು

ಶುಂಠಿಯನ್ನು ಹಲವು ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸುತ್ತೇವೆ, ಶುಂಠಿ ಬಳಸಿ ಮಧುಮೇಹ ಕೂಡ ನಿಯಂತ್ರಿಸಬಹುದು ಎಂಬುವುದು ಗೊತ್ತೇ? ಶುಂಠಿಯಲ್ಲಿ ರಕ್ತದಲ್ಲಿರುವ ಸಕ್ಕರೆಯಂಶ ನಿಯಂತ್ರಣದಲ್ಲಿಡುವ ಗುಣವಿದೆ. ನೀವೇನು ಮಾಡಬೇಕೆಂದರೆ ಸ್ವಲ್ಪ ಶುಂಠಿ ಜಜ್ಜಿ ನೀರಿನಲ್ಲಿ ಹಾಕಿ ಕುದಿಸಿ, ಸೋಸಿ ಕುಡಿಯಿರಿ. ನೆನಪಿಡಿ ತುಂಬಾ ಶುಂಠಿ ಬಳಸಿದರೆ ದೇಹ ಉಷ್ಣವಾಗಬಹುದು. ಶುಂಠಿಯನ್ನು ಮಿತಿಯಲ್ಲಿ ಬಳಸಿ.

ಮೆಂತೆ ನೀರು

ಮೆಂತೆ ನೀರು ಕೂಡ ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು. ಎರಡು ಚಮಚ ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತೆ ತಿನ್ನಿ, ಆ ನೀರನ್ನು ಕುಡಿಯಿರಿ. ಇನ್ನು ದಿನದಲ್ಲಿ ಊಟವಾದ ಬಳಿಕ ಸ್ವಲ್ಪ ಮೆಂತೆ ನೀರು ಕುದಿಸಿ ಕುಡಿದರೆ ಒಳ್ಳೆಯದು. ಇದರಿಂದ ರಕ್ತದಲ್ಲಿ ಸಕ್ಕರೆಯಂಶವನ್ನುನಿಯಂತ್ರಣದಲ್ಲಿಡಬಹುದು.

ಕಹಿಬೇವು ಔಷಧೀಯ ಗುಣವನ್ನು ಹೊಂದಿರುವುದು ನಿಮಗೆ ಗೊತ್ತೇ ಇದೆ. ಇದು ನಿಮ್ಮ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡುವಲ್ಲಿ ತುಂಬಾನೇ ಸಹಕಾರಿ. 8-10 ಕಹಿ ಬೇವಿನ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರು ಕುಡಿಯಿರಿ. ಇದರಿಂದ ರಕ್ತದಲ್ಲಿ ಸಕಕ್ರೆಯಂಶ ನಿಯಂತ್ರಣದಲ್ಲಿಡಬಹುದು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries