ಕಣ್ಣೂರು: ವಿವಾಹದ ಮನೆಯಲ್ಲಿ ಆಹಾರ ಸೇವಿಸಿದವರು ಅಸ್ವಸ್ಥರಾದ ಮಗದೊಂದು ಘಟನೆ ಕಣ್ಣೂರಲ್ಲಿ ವರದಿಯಾಗಿದೆ. 60 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಹಾರ ವಿಷವಾಗಿದೆ ಎಂದು ಶಂಕಿಸಲಾಗಿದೆ. ಕಣ್ಣೂರು ಮಲಪಟ್ಟದಲ್ಲಿ ಈ ಘಟನೆ ನಡೆದಿದೆ. ಭಾನುವಾರ ನಡೆದ ವಿವಾಹ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದವರು ಆಸ್ಪತ್ರೆಗೆ ದಾಖಲಾದವರು.
ಊಟ ಮುಗಿಸಿ ಮನೆಗೆ ಬಂದ ಸುಮಾರು 35 ಮಂದಿ ಅಸ್ವಸ್ಥರಾಗಿ ಬಳಿಕ ಆಸ್ಪತ್ರೆಗೆ ದಾಖಲಾದರು. ನಿನ್ನೆ ಬೆಳಗ್ಗೆ ಮತ್ತೆ 25 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಅವರು ಜ್ವರ, ವಾಂತಿ ಮತ್ತು ಭೇದಿಯಿಂದ ಬಳಲುತ್ತಿದ್ದರು. ಇದೇ ವೇಳೆ ಎಲ್ಲರ ಆರೋಗ್ಯ ತೃಪ್ತಿಕರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿವಾಹ ಮುನ್ನಾ ದಿನ ಊಟ ಮಾಡಿದವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅನ್ನ ಮತ್ತು ಚಿಕನ್ ಕರಿ ನೀಡಲಾಗಿತ್ತು ಎಂದು ವರದಿಯಾಗಿದೆ. 500ಕ್ಕೂ ಹೆಚ್ಚು ಮಂದಿ ಆಹಾರ ಸೇವಿಸಿದ್ದರು.
ವಿವಾಹ ಮನೆಯಲ್ಲಿ ಆಹಾರ ಸೇವಿಸಿದ 60 ಮಂದಿ ಆಸ್ಪತ್ರೆಗೆ ದಾಖಲು; ಚಿಕನ್ ಕರಿ ಸೇವಿಸಿ ಅಸ್ವಸ್ಥತೆ
0
ಜನವರಿ 10, 2023