ಕೋಯಿಕ್ಕೋಡ್: ಕೇರಳ ರಾಜ್ಯ 61ನೇ ಶಾಲಾ ಕಲೋತ್ಸವ ಜ. 3ರಿಂದ 7ರ ವರೆಗೆ ಕೋಯಿಕ್ಕೋಡಿನ ವೆಸ್ಟ್‍ಹಿಲ್‍ನಲ್ಲಿ ಜರುಗಲಿದೆ. ಜ. 3ರಂದು ಬೆಳಗ್ಗೆ 8ಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕ ಕೆ. ಜೀವನ್‍ಬಾಬು ಐ.ಎ.ಎಸ್ ಧ್ವಜಾರೋಹಣ ನಡೆಸುವರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯಮಟ್ಟದ ಶಾಲಾ ಕಲೋತ್ಸವ ಉದ್ಘಾಟಿಸುವರು.
ಶಿಕ್ಷಣ ಸಚಿವ ವಿ.ಶಿವನ್ಕುಟ್ಟಿ, ಪ್ರವಾಸೋದ್ಯಮ-ಲೋಕೋಪಂiÀ ಖಾತೆ ಸಚಿವ ರಿಯಾಸ್ ಅಹಮ್ಮದ್, ಅರಣ್ಯ ಖಾತೆ ಸಚಿವ ಎ.ಕೆ ಶಶೀಂದ್ರನ್ ಮುಂತಾದವರು ಪಾಲ್ಗೊಳ್ಳುವರು. ಗ್ರೀನ್‍ಪ್ರೊಟೋಕಾಳ್ ಅನ್ವಯ ಕಾರ್ಯಕ್ರಮ ನಡೆಯಲಿದೆ. ಒಟ್ಟು 231 ವಿಭಾಗಗಳಲ್ಲಾಗಿ ವಿವಿಧ ಸ್ಪರ್ಧೆಗಳು ನಡೆಯಲಿದ್ದು, ಇವುಗಳಲ್ಲಿ 19ವಿಭಾಗಗಳನ್ನು ಸಂಸ್ಕøತೋತ್ಸವ ಹಾಗೂ ಅರಬಿಕ್ ಸಾಹಿತ್ಯೋತ್ಸವಕ್ಕೆ ಮೀಸಲಿರಿಸಲಾಗಿದೆ. ಒಟ್ಟು 24ವೇದಿಕೆಗಳಲ್ಲಾಗಿ ನಡೆಯಲಿರುವ ಸ್ಪರ್ಧೆಗಳಲ್ಲಿ 14ಸಾವಿರಕ್ಕೂ ಹೆಚ್ಚು ಮಂದಿ ಕಲಾಪ್ರತಿಭೆಗಳು ಪಾಲ್ಗೊಳ್ಳಲಿದ್ದಾರೆ.
ಕಲೋತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲ ಸ್ಪರ್ಧಾಳುಗಳು ಹಾಗೂ ಎಸ್ಕಾರ್ಟಿಂಗ್ ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆಯೂ ಸರ್ಕಾರ ನಿರ್ದೇಶಿಸಿದೆ.
ಇಂದಿನಿಂದ ಕೋಯಿಕ್ಕೋಡಿನಲ್ಲಿ ಕೇರಳ ರಾಜ್ಯ 61ನೇ ಶಾಲಾ ಕಲೋತ್ಸವ
0
ಜನವರಿ 02, 2023