ನವದೆಹಲಿ:ಪೂರ್ವ ಲಡಾಖ್‌ನ 65 ಪೆಟ್ರೋಲಿಂಗ್ ಪಾಯಿಂಟ್‌ಗಳ ಪೈಕಿ 26 ಕ್ಕೆ ಪ್ರವೇಶವನ್ನು ಭಾರತ ಕಳೆದುಕೊಂಡಿದೆ ಎಂದು ಆ ಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ವರದಿ ಬಹಿರಂಗಪಡಿಸಿದೆಯೆಂದು ಮಾಧ್ಯಮವೊಂದು ವರದಿ ಮಾಡಿದೆ.
"ಪ್ರಸ್ತುತ 65 ಪೆಟ್ರೋಲಿಂಗ್ ಪಾಯಿಂಟ್‌ಗಳಿವೆ. ಇವು ಕರಕೋರಂ ಪಾಸ್‌ನಿಂದ ಚುಮೂರ್‌ವರೆಗಿದೆ. ಇಲ್ಲಿ ನಿಯಮಿತವಾಗಿ ಭಾರತದ ಸಶಸ್ತ್ರ ಪಡೆಗಳು ಪೆಟ್ರೋಲಿಂಗ್ ನಡೆಸುತ್ತಿದ್ದವು. ಆದರೆ ಈಗ 26 ರಲ್ಲಿ ಭಾರತದ ಉಪಸ್ಥಿತಿಯಿಲ್ಲ, ಇದು ನಿರ್ಬಂಧಿತವಾಗಿರುವುದು ಅಥವಾ ಇಲ್ಲಿ ಪೆಟ್ರೋಲಿಂಗ್ ನಡೆಸದೇ ಇರುವುದು ಕಾರಣ," ಎಂದು ಲಡಾಖ್‌ನ ಮುಖ್ಯ ನಗರವಾದ ಲೇಹ್ ಮುಖ್ಯ ಪೊಲೀಸ್ ವರಿಷ್ಠಾಧಿಕಾರಿ ಪಿ ಡಿ ನಿತ್ಯಾ ಹೇಳಿದ್ದಾರೆ.
ದಿಲ್ಲಿಯಲ್ಲಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಉಪಸ್ಥಿತಿಯಲ್ಲಿ ನಡೆದ ಉನ್ನತ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಈ ವರದಿ ಸಲ್ಲಿಸಲಾಯಿತು.
"ಇಂತಹ ಪ್ರದೇಶದಲ್ಲಿ ಭಾರತದ ಭದ್ರತಾ ಪಡೆಗಳು ಇಲ್ಲದೇ ಇರುವುದರಿಂದ ಅಥವಾ ಅಲ್ಲಿನ ನಾಗರಿಕರು ಬಹಳ ಸಮಯದಿಂದ ಇಲ್ಲದೇ ಇದ್ದುದರಿಂದ ಚೀನೀಯರು ಇದ್ದಾರೆ ಎಂದು ಚೀನಾ ನಮ್ಮನ್ನು ಒಪ್ಪುವಂತೆ ಮಾಡುತ್ತದೆ ಹಾಗೂ ಭಾರತೀಯ ಪಡೆಗಳ ನಿಯಂತ್ರಣದಲ್ಲಿರುವ ಗಡಿಯ ಬದಲಾವಣೆಗೆ ಇದು ಕಾರಣವಾಗಿ ಬಫರ್ ಝೋನ್ ರಚನೆಯಾಗಿ ಅಂತಿಮವಾಗಿ ಭಾರತ ಈ ಭೂಭಾಗಗಳ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಇಂಚಿಂಚಾಗಿ ಭಾರತದ ಭೂಭಾಗವನ್ನು ಕಬಳಿಸುವ ಪಿಎಲ್‌ಎ ನಡೆಸುವ ಈ ತಂತ್ರಗಾರಿಕೆಯನ್ನು ಸಲಾಮಿ ಸ್ಲೈಸಿಂಗ್ ಎನ್ನಲಾಗುತ್ತದೆ," ಎಂಧು ವರದಿಯಲ್ಲಿ ಹೇಳಲಾಗಿದೆ.
"ಬಫರ್ ವಲಯಗಳ ಪ್ರಯೋಜನವನ್ನು ಪಿಎಲ್‌ಎ ಪಡೆದುಕೊಂಡಿದೆ ಹಾಗೂ ಶಿಖರದ ತುದಿಗಳಲ್ಲಿ ಅವರ ಅತ್ಯುತ್ತಮ ಕ್ಯಾಮರಾ ಇರಿಸಿ ಭಾರತೀಯ ಪಡೆಗಳ ಚಲನವಲನ ಗಮನಿಸಲಾಗುತ್ತದೆ, ಬಫರ್ ವಲಯಗಳಲ್ಲಿ ಭಾರತೀಯ ಪಡೆಗಳ ಸಂಚಾರವನ್ನು ವಿರೋಧಿಸಿ ನಂತರ ನಮ್ಮನ್ನು ಹಿಂದೆ ಸರಿಯಲು ಹೇಳಿ ಇನ್ನಷ್ಟು ಬಫರ್ ವಲಯಗಳನ್ನು ಸೃಷ್ಟಿಸುವ ಉದ್ದೇಶ ಅವರು ಹೊಂದಿರುತ್ತಾರೆ," ಎಂದು ವರದಿ ಹೇಳಿದೆ.
ಆದರೆ ಸರ್ಕಾರ ಈ ವರದಿ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.