ಮುಂಬೈ: ಇನ್ನೂ ನಾಲ್ಕು ಹೆಚ್ಚಿನ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸಲಾಗಿದೆ ಎಂದು ಘೋಷಿಸಿಕೊಂಡಿರುವ ರಿಲಯನ್ಸ್ ಜಿಯೊ ಈ ಸೇವೆ ವೇಗಗತಿಯಲ್ಲಿ ಭಾರತದಾದ್ಯಂತ ವಿಸ್ತರಿಸಲಾಗುತ್ತಿದೆ ಎಂದು ಹೇಳಿದೆ.
ಗ್ವಾಲಿಯರ್, ಜಬಲ್ಪುರ್, ಲುಧಿಯಾನ ಮತ್ತು ಸಿಲಿಗುರಿ ಪಟ್ಟಣಗಳಲ್ಲಿ 5ಜಿ ಸೇವೆಯನ್ನು ವಿಸ್ತರಿಸಿಕೊಳ್ಳಲಾಗಿದ್ದು ಈ ಮೂಲಕ ಇದುವರೆಗೆ 5ಜಿ ಸೇವೆ ದೇಶದ 72 ನಗರಗಳಿಗೆ ಲಭ್ಯವಾಗಿದೆ.
ಬೇರೆ ನಗರಗಳ ಜಿಯೊ ಬಳಕೆದಾರರಿಗೆ ಜಿಯೊ ವೆಲ್ ಕಮ್ ಆಫರ್ ನ್ನು ನೀಡಲಾಗುತ್ತಿದ್ದು ಪ್ರತಿ ಸೆಕೆಂಡಿಗೆ 1 ಜಿಬಿಪಿಎಸ್ ವೇಗದಕ್ಕೆ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತಿ ಡಾಟಾ ನೀಡಲಾಗುವುದು ಎಂದು ಕಂಪೆನಿ ಹೇಳಿದೆ.
ಜಿಯೊ, 5ನೇ ತಲೆಮಾರಿನ ಮೊಬೈಲ್ ವ್ಯವಸ್ಥೆ(5G)ಯನ್ನು ದೆಹಲಿ, ಮುಂಬೈ, ವಾರಣಾಸಿ ಮತ್ತು ಕೋಲ್ಕತ್ತಾದಲ್ಲಿ ಅಕ್ಟೋಬರ್ 4ರಂದು ಆರಂಭಿಸಿತ್ತು. ಅಕ್ಟೋಬರ್ 22ರಂದು ಚೆನ್ನೈ ಮತ್ತು ನತದ್ವಾರದಲ್ಲಿ ಆರಂಭವಾಗಿದ್ದವು.
ನಂತರ ನವೆಂಬರ್ 10ರಂದು ಬೆಂಗಳೂರು ಮತ್ತು ಹೈದರಾಬಾದ್, ನಂತರ ಗುರುಗ್ರಾಮ್, ನೊಯ್ಡಾ, ಗಾಝಿಯಾಬಾದ್, ಫರಿದಾಬಾದ್ ಗಳಲ್ಲಿ ನಂತರದ ದಿನಗಳಲ್ಲಿ ಜಾರಿಗೆ ಬಂದವು. ಪುಣೆಯಲ್ಲಿ ನವೆಂಬರ್ 23ರಂದು ಹಾಗೂ ಗುಜರಾತ್ ನ 33 ಜಿಲ್ಲೆಗಳಲ್ಲಿ ನವೆಂಬರ್ 25ರಂದು ಬಿಡುಗಡೆಯಾದವು.
ನಂತರದ ದಿನಗಳಲ್ಲಿ ಹಲವು ನಗರಗಳಲ್ಲಿ 5ಜಿ ಸೇವೆಯನ್ನು ಜಿಯೊ ಬಿಡುಗಡೆ ಮಾಡುವುದರೊಂದಿಗೆ ಪ್ರಸ್ತುತ 72 ನಗರಗಳಿಗೆ ವಿಸ್ತರಿಸಿದೆ.