ಕೆನರಾ ಬ್ಯಾಂಕ್ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. 400 ದಿನಗಳ ಹೊಸ ಠೇವಣಿ ಯೋಜನೆಗಳನ್ನು ಕೆನರಾ ಬ್ಯಾಂಕ್ ಆರಂಭಿಸಿದೆ.
ಶೇಕಡ
7.15 ರಷ್ಟು ಬಡ್ಡಿ ದರದ ಯೋಜನೆಯಡಿ 25,000 ರೂ.ನಿಂದ 2 ಕೋಟಿ ರೂಪಾಯಿವರೆಗೆ ಹೂಡಿಕೆ
ಮಾಡಬಹುದು. ಅವಧಿಗೆ ಮೊದಲು ಠೇವಣಿ ಹಿಂಪಡೆಯುವುದು ಅಥವಾ ಠೇವಣಿಯ ಒಂದಿಷ್ಟು ಪಾಲನ್ನು
ಪಡೆದುಕೊಳ್ಳಲು ಈ ಯೋಜನೆಯಲ್ಲಿ ಅವಕಾಶವಿದೆ.
ಅವಧಿಗೆ
ಮೊದಲು ಠೇವಣಿ ಹಣ ಹಿಂಪಡೆಯಲು, ಒಂದಿಷ್ಟು ಪಾಲನ್ನು ಹಿಂಪಡೆಯಲು ಅವಕಾಶ ಇಲ್ಲದ ಯೋಜನೆ
ಅಡಿ 15 ಲಕ್ಷ ರೂ.ನಿಂದ 2 ಕೋಟಿ ಇರುವವರೆಗೆ ಹಣ ಹೂಡಿಕೆ ಮಾಡಬಹುದಾಗಿದ್ದು, ಇದಕ್ಕೆ
ಶೇಕಡ 7.25 ರಷ್ಟು ಬಡ್ಡಿ ದರ ನೀಡಲಾಗುವುದು. ಈ ಯೋಜನೆಗಳಲ್ಲಿ ಹಿರಿಯ ನಾಗರಿಕರಿಗೆ
ಹೆಚ್ಚುವರಿಯಾಗಿ ಶೇಕಡ 0.50 ರಷ್ಟು ಬಡ್ಡಿ ನೀಡಲಾಗುವುದು ಎಂದೂ ಕೆನರಾ ಬ್ಯಾಂಕ್
ಮಾಹಿತಿ ನೀಡಿದೆ.