ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 6 ಪ್ರಮುಖ ನಿರ್ಣಯಗಳನ್ನು ಮಾಡಲಾಯಿತು. ಜ.6ರಂದು ಉದ್ಘಾಟನೆಗೊಂಡ ನುಡಿಜಾತ್ರೆಗೆ ನಿನ್ನೆ ತೆರೆಬಿದ್ದಿತು.
೧) ಸಮ್ಮೇಳನದ ಯಶಸ್ವಿ ಹಿನ್ನೆಲೆ ಹಾವೇರಿಯ ಸಮಸ್ತ ಜನತೆಗೆ ಧನ್ಯವಾದ
೨) ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕ ಸುಗ್ರಿವಾಜ್ಞೆ ಮೂಲಕ ಜಾರಿಗೆ ಬರಬೇಕು
೩) ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಮಹಾಜನ ವರದಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿದೆ; ನ್ಯಾಯಾಲಯದ ತೀರ್ಪಿನಂತೆ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು೪) ಕನ್ನಡ ಹೋರಾಟಗಾರರ ಮೇಲಿನ ಮೊಕದಮ್ಮೆಗಳನ್ನು ಹಿಂಪಡೆಯಬೇಕು
೫) ಕನ್ನಡ ಭಾಷೆಯ ಮೇಲಿನ ಹಿಂದಿ ಹೇರಿಕೆಗೆ ಖಂಡನೆ
೬) ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನವನ್ನು ಕಸಾಪ ಸಹಯೋಗದೊಂದಿಗೆ ನೆರವೇರಿಸಬೇಕು.