ಹಾಂಗ್‌ಕಾಂಗ್: ಕೋವಿಡ್‌ನಿಂದಾಗಿ ಸುಮಾರು ಮೂರು ವರ್ಷಗಳಿಂದ ಮುಚ್ಚಿದ ಹಾಂಗ್‌ಕಾಂಗ್‌ನೊಂದಿಗಿನ ಗಡಿಯನ್ನು ಇದೇ 8ರಂದು ಮುಕ್ತಗೊಳಿಸಲಾಗುವುದು ಎಂದು ಚೀನಾ ತಿಳಿಸಿದೆ.
ಎರಡೂ
ರಾಷ್ಟ್ರಗಳ ಗಡಿಗಳ ಚೆಕ್‌ಪೋಸ್ಟ್‌ನಲ್ಲಿ ತಡೆ ರಹಿತಸಂಚಾರಕ್ಕೆ ಅವಕಾಶ
ಕಲ್ಪಿಸಲಾಗಿದ್ದು, ಭಾನುವಾರದಿಂದ ಚೀನಾ- ಹಾಂಗ್‌ಕಾಂಗ್ ನಡುವೆ ಸಂಚರಿಸುವ ವಿಮಾನಗಳ
ಸಂಖ್ಯೆಗಳ ಸಂಖ್ಯೆ ಹೆಚ್ಚಾಗಲಿದೆ.
ವಿಮಾನಗಳಲ್ಲಿ ಪ್ರಯಾಣಿಕರ ಸಂಖ್ಯೆಯ ಮಿತಿಯನ್ನು ರದ್ದು ಮಾಡಲಾಗಿದೆ ಎಂದು ಚೀನಾ ಸರ್ಕಾರ ಹೇಳಿದೆ.
ಈ
ಎರಡೂ ಗಡಿಗಳ ನಡುವಿನ ಸಂಚಾರ ಪುನರಾರಂಭದ ಮೊದಲ ಹಂತದಲ್ಲಿ ಕಳೆದ 3 ವರ್ಷಗಳಿಂದ
ಮುಚ್ಚಿದ್ದ ಏಳು ಚೆಕ್‌ಪೋಸ್ಟ್‌ಗಳ ಪೈಕಿ ನಾಲ್ಕು ಚೆಕ್‌ಪೋಸ್ಟ್‌ಗಳು ಕಾರ್ಯಾರಂಭ
ಮಾಡಲಿವೆ. ಪರಿಸ್ಥಿತಿ ಆಧರಿಸಿ ಮುಂದಿನ ದಿನಗಳಲ್ಲಿ ಬದಲಾವಣೆ ಮಾಡಲಾಗುವುದು ಎಂದು
ಸರ್ಕಾರ ತಿಳಿಸಿದೆ.