HEALTH TIPS

98ನೇ ವರ್ಷದಲ್ಲಿ ಅಯೋಧ್ಯೆಯ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಗೆ ಸಿಬ್ಬಂದಿಯಿಂದ ಬೀಳ್ಕೊಡುಗೆ!

 

              ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆ ಜೈಲಿನಲ್ಲಿದ್ದ 98 ವರ್ಷದ ಅಪರಾಧಿ ರಾಮ್ ಸೂರತ್ ಎಂಬ ಹಿರಿಯ ಜೀವವೊಂದು ಐದು ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿ ಇದೀಗ ಬಿಡುಗಡೆಗೊಂಡಿದ್ದಾರೆ. ಅವರು ಜೈಲಿನಿಂದ ಬಿಡುಗಡೆಗೊಂಡು ಹೊರ ಬರುತ್ತಿರುವ ವಿಡಿಯೋವನ್ನು ಉ.ಪ್ರ ಪೊಲೀಸ್ ಮಹಾನಿರ್ದೇಶಕ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, 11 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

              ಹಿರಿಯ ವ್ಯಕ್ತಿ ರಾಮ್ ಸೂರತ್ ಅವರನ್ನು ಸಿಬ್ಬಂದಿಗಳು ಕೈ ಹಿಡಿದುಕೊಂಡು ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಅಯೋಧ್ಯೆ ಜೈಲಿನ ಜಿಲ್ಲಾ ಅಧೀಕ್ಷಕ ಶಶಿಕಾಂತ್ ಮಿಶ್ರಾ ಪುತ್ರಾವತ್, ತಮ್ಮ ಸಿಬ್ಬಂದಿಗಳಿಗೆ ರಾಮ್ ಸೂರತ್ ಅವರನ್ನು ಸೂಕ್ತ ಸ್ಥಳಕ್ಕೆ ಬಿಟ್ಟು ಬರುವಂತೆ ಹೇಳಿದ್ದಾರೆ. ರಾಮ್ ಸೂರತ್ ಅವರು ತಮ್ಮ 98ನೇ ವರ್ಷದಲ್ಲಿ ಜೈಲಿನಿಂದ ಬಿಡುಗಡೆಯಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರನ್ನು ಕರೆದುಕೊಂಡು ಹೋಗಲು ಯಾರೂ ಬಂದಿಲ್ಲ ಎಂದು ಅಧಿಕಾರಿ ಶಶಿಕಾಂತ್ ಮಿಶ್ರಾ ಹೇಳಿಕೊಂಡಿದ್ದಾರೆ.

              ವರದಿಯ ಪ್ರಕಾರ. ರಾಮ್ ಸೂರತ್‌ ಅವರು ಐಪಿಸಿ ಸೆಕ್ಷನ್‌ 452, 323, 352 ಶಿಕ್ಷಗೆ ಗುರಿಯಾಗಿದ್ದರು. ಶಿಕ್ಷೆ ಪೂರ್ಣಗೊಂಡು ಕಳೆದ ಆಗಸ್ಟ್​ 8 ರಂದು ರಾಮ್ ಸೂರತ್ ಬಿಡುಗಡೆಯಾಗಬೇಕಿತ್ತು. ಆದರೆ ಮೇ ತಿಂಗಳಿನಲ್ಲಿ ಕರೊನಾ ಸೋಂಕಿಗೆ ಒಳಗಾಗಿ ಪೆರೋಲ್ ಮೇಲೆ 90 ದಿನಗಳ ಕಾಲ ಜೈಲಿನಿಂದ ಹೊರ ಕಳುಹಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries