ಸೆಲ್ಮಾ : ಅಮೆರಿಕದ ಜಾರ್ಜಿಯಾ ಮತ್ತು ಅಲಬಾಮಾದಲ್ಲಿ ಚಂಡಮಾರುತಕ್ಕೆ ಸಿಲುಕಿ 9 ಮಂದಿ ಮೃತಪಟ್ಟಿದ್ದಾರೆ. ಕುಸಿದು ಬಿದ್ದ ಮನೆಗಳಲ್ಲಿ ಸಿಲುಕಿದವರನ್ನು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹೊರಗೆಳೆಯುತ್ತಿದ್ದಾರೆ.
ಬದುಕುಳಿದವರು ಭಗ್ನಾವಶೇಷಗೊಂಡ ಮನೆಗಳಲ್ಲಿ ಅಳಿದುಳಿದ ವಸ್ತುಗಳನ್ನು ಹುಡುಕುತ್ತಿದ್ದಾರೆ.