HEALTH TIPS

9 ರಂದು ಪ್ರಧಾನಮಂತ್ರಿ ರಾಷ್ಟ್ರೀಯ ಶಿಷ್ಯವೃತ್ತಿ ಮೇಳ





        ಕಾಸರಗೋಡು: ಐಟಿಐ ಕಾಸರಗೋಡಿನಲ್ಲಿ ಜನವರಿ 9 ರಂದು ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರ ವರೆಗೆ ಪ್ರಧಾನಮಂತ್ರಿ ರಾಷ್ಟ್ರೀಯ ಶಿಷ್ಯವೃತ್ತಿ ಮೇಳವನ್ನು ಆಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ-ಕೈಗಾರಿಕಾ ಸಚಿವಾಲಯ,  ರಾಜ್ಯ ಉದ್ಯೋಗ ಮತ್ತು ಕೌಶಲ್ಯ ಇಲಾಖೆಗಳ ಜಂಟಿ ಆಶ್ರಯದಲ್ಲಿ ಕೈಗಾರಿಕಾ ತರಬೇತಿ ಇಲಾಖೆಯ ನೇತೃತ್ವದಲ್ಲಿ ಮೇಳವು ನಡೆಯಲಿರುವುದು.
           ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳು ಟ್ರೇಡ್ ಅಪ್ರೆಂಟಿಸ್‍ಗಳನ್ನು (ಶಿಷ್ಯವೃತ್ತಿಪರರು)ಆಯ್ಕೆ ಮಾಡಬಹುದಾಗಿದೆ. ಇಂಜಿನಿಯರಿಂಗ್ ಮತ್ತು ನೋನ್-ಇಂಜಿನಿಯರಿಂಗ್ ಟ್ರೇಡ್‍ಗಳಲ್ಲಿ ಐಟಿಐ ಅರ್ಹತೆ ಪಡೆದ ವಿದ್ಯಾರ್ಥಿಗಳು ಭಾಗವಹಿಸಬಹುದು. ಕಲಿಕೆಯ ಜೊತೆಗೆ ಸಂಪಾದನೆ ಎಂಬ ಉದ್ದೇಶದಿಂದ ಮೇಳ ನಡೆಯುತ್ತಿದೆ. ಭಾಗವಹಿಸುವವರು ಅರ್ಹತಾ ಪ್ರಮಾಣಪತ್ರಗಳು ಮತ್ತು ಆಧಾರ್ ಕಾರ್ಡ್ ನ್ನು ತರಬೇಕು.  ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(9048790503, 9495135094, 04994 256440)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries