ಕಾಸರಗೋಡು: ಬೇಕಲ್ ಫೆಸ್ಟ್ ಕೋಮುವಾದಿ ಧೋರಣೆಗಳಿಗೆ ಪರ್ಯಾಯವಾಗಿದೆ ಎಂದು ಕೇರಳ ವಿಧಾನಸಭಾ ಸಭಾಪತಿ ಎ.ಎನ್.ಶಂಸೀರ್ ತಿಳಿಸಿದರು.
ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕøತಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇಕಲ್ ಫೆಸ್ಟ್ ನಂತಹ ಹಬ್ಬಗಳು ಮೂಢನಂಬಿಕೆ ಮತ್ತು ಕೋಮುವಾದಕ್ಕೆ ಪರ್ಯಾಯವಾಗುತ್ತಿವೆ. ಬೇಕಲ ಬೀಚ್ ಉತ್ಸವದಂತಹ ಕಾರ್ಯಕ್ರಮಗಳು ಜಾತಿ, ಧರ್ಮ ಮೀರಿ ಅಸ್ತಿತ್ವದಲ್ಲಿರಬೇಕು. ಬೇಕಲ್ ಫೆಸ್ಟ್ ಜಾತ್ಯತೀತ ಶಕ್ತಿಗಳಿಗೆ ಪ್ರತಿಕ್ರಿಯೆಯಾಗಿದೆ. ಇದು ಜಾತಿ, ಧರ್ಮ, ಬಣ್ಣ ಮತ್ತು ವರ್ಗದ ಭೇದವಿಲ್ಲದೆ ಎಲ್ಲ ಜನರನ್ನು ಒಂದುಗೂಡಿಸುತ್ತದೆ. ಬೇಕಲ್ ಫೆಸ್ಟ್ ಕೇರಳದ ಪ್ರಮುಖ ಪ್ರವಾಸೋದ್ಯಮ ಉತ್ಸವಗಳಲ್ಲಿ ಒಂದಾಗಿದೆ ಎಂದವರು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಉನ್ನತ ಶಿಕ್ಷಣ ಸಚಿವೆ ಡಾ.ಆರ್.ಬಿಂದು ಮುಖ್ಯ ಅತಿಥಿಯಾಗಿದ್ದರು. ಕಲೆ ಮತ್ತು ಸಾಹಿತ್ಯವು ಮಾನವ ಮನಸ್ಸಿನ ಗೋಡೆಗಳನ್ನು ತೊಡೆದುಹಾಕುತ್ತದೆ ಮತ್ತು ಬೇಕಲ ಬೀಚ್ ಉತ್ಸವವು ಜಾತ್ಯತೀತತೆಯನ್ನು ಉತ್ತೇಜಿಸುವ ವೇದಿಕೆಯಾಗಿದೆ ಎಂದು ಸಚಿವರು ಹೇಳಿದರು.
ಕೇರಳ ಸಂಗೀತ ನಾಟಕ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ ರಾಜಮೋಹನ್ ನೀಲೇಶ್ವರ ಉಪನ್ಯಾಸ ನೀಡಿದರು. ಮಾಜಿ ಶಾಸಕ ಕೆ.ಕುಂಞÂ ರಾಮನ್, ಕಾಞಂಗಾಡು ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಮೊದಲಾದವರು ಮಾತನಾಡಿದರು.ಕಾಞಂಗಾಡು ನಗರಸಭೆಯ ಮಾಜಿ ಅಧ್ಯಕ್ಷ ವಿ.ವಿ.ರಮೇಶನ್ ಸ್ವಾಗತಿಸಿ, ಯಾತ್ರಾಶ್ರೀ ಸಂಯೋಜಕಿ ರಮ್ಯಶ್ರೀ ವಂದಿಸಿದರು.