ಉತ್ತರಪ್ರದೇಶ: ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ ಎಂಬ ಮಾತಿದೆ. ಆದರೆ ಇಲ್ಲೊಂದು ಕಡೆ ಗಂಡ-ಹೆಂಡಿರ ಜಗಳ ಚೂರಿ ಇರಿಯುವ ತನಕ ಎಂಬಂತಾಗಿದೆ. ಅಂದರೆ ಇಲ್ಲೊಬ್ಬಳು ಪತ್ನಿ ಪತಿಗೇ ಚಾಕುವಿನಿಂದ ಚುಚ್ಚಿದ್ದಾಳೆ. ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ನಡೆದಿದೆ.
ಫತೇಘರ್ ಕೊತ್ವಾಲಿ ಪ್ರದೇಶದ ಬುಧ್ನಮಾವು ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಿತಿನ್ ಎಂಬಾತ ಇರಿತಕ್ಕೊಳಗಾದ ಪತಿ. ಈತ ಮದುವೆಯಾಗಿ 15 ವರ್ಷಗಳಾಗಿದ್ದು, ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಮಕ್ಕಳು ಹಾಲು ಚೆಲ್ಲಿದ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಗಲಾಟೆ ಆಗಿತ್ತು.
ಸಣ್ಣ ಜಗಳದ ಬಳಿಕ ಪತಿ ಟೀ ಮಾಡಿ ಕೊಡುವಂತೆ ಪತ್ನಿಗೆ ಹೇಳಿದ್ದ. ಮೊದಲೇ ಮನಸು ಕೆಟ್ಟಂತಿದ್ದ ಪತ್ನಿ, ಪತಿ ಟೀ ಕೇಳಿದಾಗ ಇನ್ನಷ್ಟು ಸಿಟ್ಟಾಗಿ ಮಾತಿಗೆ ಮಾತು ಬೆಳೆದಿದೆ. ಬಳಿಕ ರೊಚ್ಚಿಗೆದ್ದ ಆಕೆ ಚಾಕು ತೆಗೆದುಕೊಂಡು ಗಂಡನ ಮುಖ-ಎದೆಗೆ ಚುಚ್ಚಿದ್ದಾಳೆ. ಸದ್ಯ ನಿತಿನ್ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.