ಶಬರಿಮಲೆ: ಮಕರ ಬೆಳಕು ಉತ್ಸವಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವಂತೆಯೇ ಸನ್ನಿಧಾನದಲ್ಲಿ ಭಕ್ತರ ದಂಡೇ ಹರಿದುಬರುತ್ತಿದೆ. ಮಂಡಲದ ಸಮಯದಲ್ಲಿ, ಹೆಚ್ಚಿನ ಭಕ್ತರು ತಮಿಳುನಾಡು, ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಿಂದ ಬರುತ್ತಿದ್ದಾರೆ.
ತುಪ್ಪಾಭಿಷೇಕ ಸೇವೆಗೇ ಅತೀ ಹೆಚ್ಚಿನ ಜನದಟ್ಟಣೆ ಕಂಡುಬಂದಿದೆ.
ನಿಲಕ್ಕಲ್ ಬೇಸ್ ಕ್ಯಾಂಪ್ ಯಾತ್ರಿಕರ ವಾಹನಗಳಿಂದ ತುಂಬಿ ತುಳುಕುತ್ತಿದೆ. ಈಗ ದರ್ಶನಕ್ಕೆ ಬರುವ ಯಾತ್ರಾರ್ಥಿಗಳ ನಡುವೆ ಒಂದು ಗುಂಪು ಮಕರಜ್ಯೋತಿ ದರ್ಶನ ಮುಗಿಸಿ ಹಿಂತಿರುಗುತ್ತದೆ. ಮಕರಜ್ಯೋತಿ ವೀಕ್ಷಿಸುವ ಪ್ರದೇಶಗಳಲ್ಲಿ ಯಾತ್ರಾರ್ಥಿಗಳು ವಿಶ್ರಾಂತಿ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಪೆÇಲೀಸರು ಹಾಗೂ ಕೇಂದ್ರ ಪಡೆಗಳ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.
ಮಕರ ಬೆಳಕು ಮಹೋತ್ಸವ ಹಿನ್ನೆಲೆಯಲ್ಲಿ ಗರ್ಭಗೃಹದ ಬಾಗಿಲು ತೆರೆದ ಬಳಿಕ ಇದೀಗ ಪ್ರತಿದಿನ ಸನ್ನಿಧಿಗೆ ಭಕ್ತರ ದಂಡು ಹರಿದು ಬರುತ್ತಿದೆ. ಮಕರ ಬೆಳಕಿನ ವೀಕ್ಷಣೆ ವೇಳೆ ಯಾತ್ರಾರ್ಥಿಗಳ ಅನಿಯಂತ್ರಿತ ನೂಕುನುಗ್ಗಲು ಉಂಟಾಗುವ ಸಾಧ್ಯತೆಯಿದೆ. ಜನಸಂದಣಿ ನಿಯಂತ್ರಿಸಲು ಹಾಗೂ ಶಬರಿಮಲೆಗೆ ಆಗಮಿಸುವ ಎಲ್ಲ ಭಕ್ತರಿಗೆ ದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲು ಪೋಲೀಸರು ಸನ್ನದ್ಧರಾಗಿದ್ದಾರೆ ಎಂದು ಸನ್ನಿಧಾನಂ ವಿಶೇμÁಧಿಕಾರಿ ವಿ.ಎಸ್. ಅಜಿ ಹೇಳಿರುವರು.
ವರ್ಚುವಲ್ ಕ್ಯೂ ಬುಕ್ಕಿಂಗ್ ಮುಗಿದರೂ ಸಾಮಾನ್ಯ ಬುಕಿಂಗ್ ಸೌಲಭ್ಯವನ್ನು ಬಳಸಿಕೊಂಡು ದರ್ಶನ ಸಾಧ್ಯವಿದ್ದು, ಬೇರೆ ರಾಜ್ಯಗಳ ಭಕ್ತರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು. ದರ್ಶನದ ನಂತರ ಭಕ್ತರು ಸನ್ನಿಧಿಯಲ್ಲಿ ತಂಗದೆ ತ್ವರಿತವಾಗಿ ಪಂಬಾಗೆ ಹಿಂತಿರುಗಿ ಸಹಕರಿಸಬೇಕು ಎಂದು ವಿವಿಧ ಭಾಷೆಗಳಲ್ಲಿ ಧ್ವನಿವರ್ಧಕಗಳ ಮೂಲಕ ತಿಳಿಸಲಾಗುತ್ತಿದೆ.
ಶಬರೀಶನ ಸನ್ನಿಧಿಯಲ್ಲಿ ಭಕ್ತರ ಮಹಾಹರಿವು; ಜನದಟ್ಟಣೆ ಹೆಚ್ಚಿದಂತೆ ದರ್ಶನಕ್ಕಾಗಿ ಗಂಟೆಗಟ್ಟಲೆ ಸರತಿ ಸಾಲು
0
ಜನವರಿ 06, 2023