ಕಾಸರಗೋಡು: ಅವಿಭಜಿತ ಕಣ್ಣೂರು ಹಾಗೂ ದಕ್ಷಿಣ ಕರ್ನಾಟಕದಾದ್ಯಂತ ಖ್ಯಾತಿ ಗಳಿಸಿರುವ ನ್ಯಾಯ ದೇಗುಲ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ಕಳಿಯಾಟ ಮಹೋತ್ಸವ ಮಂಗಳವಾರ ಸಂಪನ್ನಗೊಳ್ಳಲಿದೆ.
3ರಂದು ಬೆಳಗ್ಗೆ ಕಳಗ ಒಪ್ಪಿಸುವುದು ಜತೆಗೆ ಭಂಡಾರ ನಿರ್ಗಮನದೊಂದಿಗೆ ಕಳಿಯಾಟ ಮುಕ್ತಾಂiÀiಗೊಳ್ಳಲಿದೆ. ಶ್ರೀ ರಕ್ತೇಶ್ವರೀ, ಚಾಮುಂಡಿ ದೈವ, ವಿಷ್ಣುಮೂರ್ತಿ, ಪಂಜುರ್ಲಿ ಒಳಗೊಂಡ ನಾಲ್ವರ್ ದೈವಗಳು, ಶ್ರೀ ಪೂಮಾಣಿ ಕಿನ್ನಿಮಾಣಿ ಈರ್ವರ್ ಉಳ್ಳಾಕ್ಲು ದೈವಗಳು, ಪಾಶಾಣಮೂರ್ತಿ ದೈವಕೋಲ ವಿವಿಧ ಉಪದೈವಗಳ ಕೋಲ ನಡೆಯಿತು. ದೈವಕೋಲದೊಂದಿಗೆ ಪ್ರೇತ ವಿಮೋಚನಾ ಕಾರ್ಯದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡಿದ್ದರು.