ಮಂಜೇಶ್ವರ: ಪಾವೂರು ಪೆÇಯ್ಯೇಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಶಿವರಾಮ ಶೆಟ್ಟಿ ಮುಗೇರು ಗುತ್ತು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಳಿಗುತ್ತು ರಾಜ ವಿಠಲ್ ನಾಯ್ಕ್ ಮಂಗಳೂರು ಭಾಗವಹಿಸಿದ್ದರು. ಸಭೆಯಲ್ಲಿ ಕ್ಷೇತ್ರದ ಅರ್ಚಕರು, ದರ್ಶನ ಪಾತ್ರಿ ಹಾಗೂ ಕ್ಷೇತ್ರ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷರುಗಳಾದ ಟಿ ತ್ಯಾಂಪಣ್ಣ ರೈ, ವಸಂತ ಬಂಗೇರ ರಂಜಪಡ್ಪು, ಚಂದ್ರಹಾಸ ಪೂಜಾರಿ ಮುಡಿಮಾರು, ಭುಜಂಗ ಸೀಂತಾಜೆ, ಭೋಜ ಮಾಸ್ತರ್ ಬಳ್ಳೂರು, ರವಿ ಮುಡಿಮಾರ್, ಮಾಧವ ಪೂಜಾರಿ ಕುದುಕೋರಿ, ಉದಯಕುಮಾರ್ ಬೊಳಕಡ, ವಿನೋದ್ ರೆಂಜೆಪಡ್ಪು, ನವೀರಾಜ್ ಮುಡಿಮಾರ್, ನಾರಾಯಣ ಕಲ್ಲಾಜೆ, ಕಮಲಾಕ್ಷ ನಾಯಕ್ ಬಜಾಲ್, ಉಮೇಶ್ ಕೊಪ್ಪಳ, ಪುಷ್ಪರಾಜ್ ಪಾವೂರುಗುತ್ತು, ವಿಶ್ವನಾಥ್ ಕಲ್ಲಾಜೆ ಸಹಿತ ಹಲವಾರು ಭಕ್ತಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
0
ಜನವರಿ 11, 2023