ಕೂದಲು ಕೂದುರುವುದು ಸರ್ವೇ ಸಾಮಾನ್ಯ ಸಮಸ್ಯೆವಾಗಿದೆ. ಕೂದಲು ಉದುರುವ ಸಮಸ್ಯೆ ಬೇರೆ, ಆದರೆ ಕೆಲವರಿಗೆ ತಲೆಯಲ್ಲಿ ಪ್ಯಾಚಸ್ ಕಂಡು ಬರುವುದು. ತುಂಬಾ ಜನರಲ್ಲಿ ಈ ಬಗೆಯ ಸಮಸ್ಯೆ ಕಂಡು ಬರುತ್ತದೆ. ಏಕೆ ಈ ರೀತಿ ಬರುತ್ತದೆ, ಇದಕ್ಕೆ ಮನೆಮದ್ದೇನು ಎಂದು ನೋಡೋಣ ಬನ್ನಿ:
ಕೂದಲಿನಲ್ಲಿ ಪ್ಯಾಚಸ್ ಬರಲು ಕಾರಣವೇನು?
ತಲೆಯಲ್ಲಿ ಪ್ಯಾಚಸ್ ರೀತಿ ಬಕ್ಕ ತಲೆ ಕಂಡು ಬರಲು ಅನೇಕ ಕಾರಣಗಳಿವೆ. ಈ ರೀತಿ ಪ್ಯಾಚ್ -ಪ್ಯಾಚ್ ಬಕ್ಕತಲೆ ಬರುವುದಕ್ಕೆ ವೈದ್ಯಕೀಯ ಭಾಷೆಯಲ್ಲಿ Alopecia areata ಎಂದು ಕರೆಯಲಾಗುವುದು. ಈ ರೀತಿ ತಲೆಯಲ್ಲಿ ಮಾತ್ರವಲ್ಲ, ಪುರುಷರಿಗೆ ಗಡ್ಡದಲ್ಲೂ ಉಂಟಾಗುವುದು. ಇದು ಕೂಡ ಅಟೋಇಮ್ಯೂನೆ ಸಮಸ್ಯೆಯಾಗಿದೆ. ನಮ್ಮ ರೋಗ ನಿರೋಧಕ ವ್ಯವಸ್ಥೆ ತಪ್ಪಾಗಿ ನಮ್ಮ ಅಂಗಗಳ ಮೇಲೆ ದಾಳಿ ಮಾಡುವ ಸ್ಥಿತಿಯಾಗಿದೆ.
ಈ ರೀತಿಯಾದರೆ ಗುಣಪಡಿಸಬಹುದೇ?
ಖಂಡಿತ ಗುಣಪಡಿಸಬಹುದು, ನೀವು ಸೂಕ್ತ ಚಿಕಿತ್ಸೆ ಪಡೆದರು ನಿಮ್ಮ ತಲೆಕೂದಲು ಮೊದಲನಂತಾಗುವುದು, ಗಡ್ಡದಲ್ಲಿ ಈ ಬಗೆಯ ಸಮಸ್ಯೆಯಿದ್ದರೆ ಸರಿ ಹೋಗುವುದು.
ಈ ಸಮಸ್ಯೆ ಹೋಗಲಾಡಿಸಲು ಆಯುರ್ವೇದಲ್ಲಿ ಕೆಲವೊಂದು ಮನೆಮದ್ದುಗಳಿವೆ, ಅವುಗಳ ಬಗ್ಗೆ ತಿಳಿಯೋಣ ಬನ್ನಿ:
ಕೂದಲಿನ ಅನೇಕ ಬಗೆಯ ಸಮಸ್ಯೆಗೆ ನೆಲ್ಲಿಕಾಯಿ ಅತ್ಯುತ್ತಮ ಪರಿಹಾರ ಎಂಬುವುದು ಗೊತ್ತೇ ಇದೆ. ತಲೆಯಲ್ಲಿ ಪ್ಯಾಚ್-ಪ್ಯಾಚ್ ಬಕ್ಕ ತಲೆ ಉಂಟಾಗುವುದನ್ನು ತಡೆಯಲೂ ಇದ ಸಹಕಾರಿ ಗೊತ್ತೇ?
ಈ ಬಗೆಯ ಸಮಸ್ಯೆ ಇರುವವರು ದಿನಾ ಒಂದು ನೆಲ್ಲಿಕಾಯಿ ತಿನ್ನಬೇಕು. ತಲೆಗೆ ನೆಲ್ಲಿಕಾಯಿ ಎಣ್ಣೆಯಿಂದ ಮಸಾಜ್ ಮಾಡಬೇಕು. ಈ ವಿಧಾನ ಪ್ಯಾಚ್ ಹೋಗಲಾಡಿಸಿ, ದಟ್ಟವಾದ ಕೂದಲು ಮರಳಿ ಪಡೆಯಬಹುದು, ಇನ್ನು ಕೂದಲು ಉದುರುವ ಸಮಸ್ಯೆಗೂ ಪರಿಹಾರ ಸಿಗುವುದು.
ಭೃಂಗರಾಜ
ಕೂದಲಿನ ಸಮಸ್ಯೆಗೆ ಮತ್ತೊಂದು ಅದ್ಭುತ ಮನೆಮದ್ದೆಂದರೆ ಭೃಂಗರಾಜ. ಇದನ್ನು ಆಯುರ್ವೇದಲ್ಲಿ ಹೆಚ್ಚಾಗಿ ಬಳಸಲಾಗುವುದು. ಭೃಂಗರಾಜ ಎಣ್ಣೆ ಅಥವಾ ಭೃಂಗರಾಜ ಎಲ್ಲಾ ಆಯುರ್ವೇದ ಅಂಗಡಿಗಳಲ್ಲಿ ದೊರೆಯುತ್ತದೆ. ಭೃಂಗರಾಜ ಗಿಡ ಸಿಕ್ಕರೆ ತಂದು ನೆಟ್ಟು ಬೆಳೆಸಬಹುದು. ಭೃಂಗರಾಜವನ್ನು ಎಣ್ನೆಗೆ ಹಾಕಿ ಕಾಯಿಸಿ ಆ ಎಣ್ಣೆ ಬಳಸುತ್ತಾ ಬಂದರೆ ಈ ಬಗೆಯ ಪ್ಯಾಚ್ ದೂರಾಗುವುದು.
ಅಂಟ್ವಾಳ ಕಾಯಿ
ಇನ್ನು ತಲೆಯಲ್ಲಿ ಪ್ಯಾಚ್ ಉಂಟಾಗಿದ್ದರೆ ಶ್ಯಾಂಪೂ ಬಳಸಬೇಡಿ, ಬದಲಿಗೆ ಅಂಟ್ವಾಳ ಕಾಯಿ ಹಾಕಿ ತಲೆ ತೊಳೆಯಿರಿ. ಅಂಟ್ವಾಳ ಕಾಯಿ ಪುಡಿ ಬಳಸಬಹುದು ಅಥವಾ ಕಾಯಿ ಜಜ್ಜಿ ಅದನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಹಾಕಿ ನೊರೆ ಬರಿಸಿ ಅದರಲ್ಲಿ ತಲೆತೊಳೆಯಿರಿ. ಹಿಂದಿನ ಕಾಲದಲ್ಲಿ ಶ್ಯಾಂಪೂ ಬದಲಿಗೆ ಇದನ್ನೇ ಬಳಸುತ್ತಿದ್ದರು. ಅಂಟ್ವಾಳಕಾಯಿ ಬಳಸಿದಾಗ ಕೂದಲು ಕೂಡ ಸುವಾಸನೆಯಿಂದ ಕೂಡಿರುತ್ತದೆ, ಕೂದಲಿನ ಹೊಳಪು ಹೆಚ್ಚುವುದು.