HEALTH TIPS

ಎಡರಂಗದ ದುರಾಡಳಿತ ಬಿಜೆಪಿ ಮಂಡಲ ಸಮಿತಿಯಿಂದ ಕಾಲ್ನಡೆ ಯಾತ್ರೆ

 

              ಕಾಸರಗೋಡು: ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಅನುಸರಿಸುತ್ತಿರುವ ಜನವಿರೋಧಿ ನೀತಿಯಿಂದ ಜನಸಾಮಾನ್ಯರ ಜೀವನ ದುಸ್ತರವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ವಕೀಲ ಕೆ. ಪ. ಪ್ರಕಾಶ್ ಬಾಬು ತಿಳಿಸಿದ್ದಾರೆ.
         ಅವರು ಬಿಜೆಪಿ ಕಾಸರಗೋಡು ಮಂಡಲ ಸಮಿತಿ ವತಿಯಿಂದ ಎಡರಂಗ ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಮೊಗ್ರಾಲ್‍ಪುತ್ತೂರಿನ ಪಂಜಿಗುಡ್ಡೆಯಲ್ಲಿ ಆಯೋಜಿಸಲಾದ  ಪಾದಯಾತ್ರೆ ಉದ್ಘಾಟಿಸಿ ಮಾತನಾಡಿದರು. ಮಂಡಲ ಸಮಿತಿ ಅಧ್ಯಕ್ಷೆ ಹಾಗೂ ಜಾಥಾ ನಾಯಕಿ ಪ್ರಮಿಳಾ ಮಜಲ್ ಅವರಿಗೆ ಧ್ವಜ ಹಸ್ತಾಂತರಿಸಿ ಕಾಲ್ನಡೆ ಜಾಥಾ ಉದ್ಘಾಟಿಸಿದರು.
              ಬಿಜೆಪಿ ರಾಜ್ಯ ಸಮಿತಿ ಸದಸ್ಯ ಕೆ. ಸವಿತಾ ಟೀಚರ್, ರಾಜ್ಯ ಸಮಿತಿ ಸದಸ್ಯ ಎನ್. ಸತೀಶ್, ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ, ಯುವ ಮೋರ್ಚಾ ರಾಜ್ಯ ಮಹಿಳಾ ಸಂಚಾಲಕಿ ಅಂಜು ಜೋಸ್ಟಿ, ಜಿಲ್ಲಾ ಸಮಿತಿ ಕೋಶಾಧಿಕಾರಿ ಮಹಾಬಲ ರೈ, ಎಸ್‍ಸಿ-ಮೋರ್ಚಾ ಜಿಲ್ಲಾಧ್ಯಕ್ಷ ಕೆ. ಪಿ ಸಂಪತ್ ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪುಷ್ಪಾ ಗೋಪಾಲನ್, ಮಂಡಲ ಪ್ರಬಾರಿ ಹಾಗೂ ಜಿಲ್ಲಾ ಕಾರ್ಯದರ್ಶಿ ಎನ್. ಮಧು, ಮೊಗ್ರಾಲ್ ಪುತ್ತೂರು ಪಂಚಾಯಿತಿ ಸಮಿತಿ ಅಧ್ಯಕ್ಷ  ಚಂದ್ರಶೇಖರ್, ಮಧೂರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ ಕೂಡ್ಲು ಉಪಸ್ಥಿತರಿದ್ದರು. ಮಂಡಲಂ ಪ್ರಧಾನ ಕಾರ್ಯದರ್ಶಿ ಸುಕುಮಾರನ್ ಕುದುರೆಪಾಡಿ ಸ್ವಾಗತಿಸಿದರು. ಗುರು ಪ್ರಸಾದ್ ಪ್ರಭು ವಂದಿಸಿದರು.
            ಇಂದು ಮೊಗ್ರಾಲ್ ಪುತ್ತೂರು ಪಂಚಾಯತ್ ನ ಪಂಚದಗುಡ್ಡೆಯಿಂದ ಆರಂಭಗೊಂಡ ಪಾದಯಾತ್ರೆ ಮಧೂರು ಪಂಚಾಯಿತಿ ಭಗವತೀ ನಗರ ಮೂಲಕ ಸಾಗಿ ಚೇರಂಗೈ ಕಡಪ್ಪುರದಲ್ಲಿ ಸಂಪನ್ನಗೊಂಡಿತು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries