ಮಂಜೇಶ್ವರ: ವರ್ಕಾಡಿ ಕೋಳ್ಯೂರು ಶ್ರಿ ಶಂಕರನಾರಾಯಣ ದೇವಸ್ಥಾನ ವಾರ್ಷಿಕ ಜಾತ್ರಾಮಹೋತ್ಸವ ಸೋಮವಾರ ಆರಂಭಗೊಂಡಿತು. ವೇದಮೂರ್ತಿ ವರ್ಕಾಡಿ ದಿನೇಶ ತಂತ್ರಿ ಅವರ ನೇತೃತ್ವದಲ್ಲಿಕಾರ್ಯಕ್ರಮ ನಡೆಯುತ್ತಿದೆ.
ಸೋಮವಾರ ಭಜನೆ, ಶ್ರೀದೇವರಿಗೆ ಕಾಣಿಕ್ಕಾಯಿ ಇಡುವ ಮೂಲಕ ಪದಾರ್ಥ ಹಚ್ಚುವ ಕಾರ್ಯಕ್ರಮ ನಡೆಯಿತು. ನಂತರ ಶ್ರೀದೇವರಿಗೆ ಕಾರ್ತಿಕ ಪೂಜೆ, ಶ್ರೀದೇವರ ಬಲಿ ಉತ್ಸವ ನಡೆಯಿತು. 3ರಂದು ಬೆಳಗ್ಗೆ 6ಕ್ಕೆ ಶ್ರೀ ಶಂಕರನಾರಾಯಣ ದೇವರ ಬಲಿ ಉತ್ಸವ, 8ಕ್ಕೆ ಕುಣಿತ ಭಜನೆ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಬಲಿ ಉತ್ಸವ, ಸಂಜೆ ಬಯ್ಯತ ಬಲಿ, ಕಟ್ಟೆಪೂಜೆ, ಉತ್ಸವ, ರಾತ್ರಿ ಬಲಿ ಉತ್ಸವ ನಡೆಯುವುದು. 4ರಂದು ಶ್ರೀದೇವರ ಬೆಳಗಿನ ಬಲಿ ಉತ್ಸವ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ, ಮಧ್ಯಾಃನ 2.30ಕ್ಕೆ ಯಕ್ಷಗಾನ ಬಯಲಾಟ, ರತ್ರಿ ರಂಗಪೂಜೆ, ಶ್ರೀಭೂತಬಲಿ ಉತ್ಸವ, ಮಂತ್ರಾಕ್ಷತೆ ನಡೆಯುವುದು.
ಕೋಳ್ಯೂರು ದೇವಸ್ಥಾನ ವಾರ್ಷಿಕ ಜಾತ್ರೆ ಆರಂಭ
0
ಜನವರಿ 02, 2023