ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 2024 ರಲ್ಲಿ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರ ಹೊಸ ಸಾಧನೆಗಳನ್ನು ಮಾಡುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹೊಸ ಉತ್ತುಂಗಕ್ಕೆ ಏರುತ್ತಿದೆ. ಇದರ ಪರಿಣಾಮವಾಗಿ 2024 ರ ವೇಳೆಗೆ ಮೊದಲ ಸ್ವಾವಲಂಬಿ ಗಗನ್ ಯಾನ್ ಮೂಲಕ ಭಾರತ ಬಾಹ್ಯಾಕಾಶವನ್ನು ಪ್ರವೇಶಿಸುತ್ತಿದೆ ಎಂದು ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಗಗನ್ ಯಾನ್ 2022 ರಲ್ಲೇ ಸಾಕಾರವಾಗಬೇಕಿತ್ತು ಆದರೆ ಕೋವಿಡ್-19 ನಿಂದಾಗಿ ವಿಳಂಬವಾಗಿದೆ, 2024 ರಲ್ಲಿ ಎರಡು ಪ್ರಾಥಮಿಕ ಉಡಾವಣೆಗಳಾಗಲಿವೆ ಏಕೆಂದರೆ ಗಗನ್ ಯಾನ್ ರಾಕೆಟ್ ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ತೆರಳಿಂದತೆಯೇ ಸುರಕ್ಷಿತವಾಗಿ ವಾಪಸ್ಸಾಗುವುದನ್ನು ಖಾತ್ರಿಪಡಿಸಿಕೊಳ್ಳಬೇಕಿದೆ. ಮತ್ತೊಂದು ಪ್ರಯೋಗದಲ್ಲಿ ಮನುಷ್ಯರಿಲ್ಲದೇ ಕೇವಲ ರೋಬೋಟ್ ರಾಕೆಟ್ ನಲ್ಲಿರಲಿದ್ದು, ಎರಡೂ ಪ್ರಯೋಗಗಳು ಯಶಸ್ವಿಯಾದ ನಂತರ ಮೂರನೇ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯಾನ ಸಾಕಾರಗೊಳ್ಳಲಿದೆ ಎಂದು ಸಚಿವರು ಹೇಳಿದ್ದಾರೆ.