ಕಾಸರಗೋಡು: ಕಾಞಂಗಾಡಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಾರ್ಚ್‍ನಲ್ಲಿ ಚಟುವಟಿಕೆ ಆರಂಭಿಸಲಿರುವುದಾಗಿ ಆರೋಗ್ಯ ಖಾತೆ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ. ಅವರು ಜಿಲ್ಲೆಯ ಆರೋಗ್ಯ ಕ್ಷೇತ್ರದ ವಿವಿಧ ಸಮಸ್ಯೆಗಳ ಕುರಿತು ಕಾಞಂಗಾಡಿನ ಮಿನಿ ಸಿವಿಲ್ ಸ್ಟೇಶನ್ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು. ಟಾಟಾ ಟ್ರಸ್ಟ್ ಕೋವಿಡ್ ಆಸ್ಪತ್ರೆ ಅಸ್ತಿತ್ವದಲ್ಲಿರುವ ಸ್ಥಳದಲ್ಲಿ ಸ್ಪೆಶ್ಯಾಲಿಟಿ ಆಸ್ಪತ್ರೆ ಸ್ಥಾಪಿಸುವ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಪ್ರಸಕ್ತ ಇರುವ ವ್ಯವಸ್ಥೆಯನ್ನು ಅಧ್ಯಯನ ಮಾಡಲು ತಾಂತ್ರಿಕ ತಜ್ಞರ ಸಮಿತಿಯನ್ನು ನೇಮಿಸಿ ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು. ಈ ನಿಟ್ಟಿನಲ್ಲಿ ಶೀಘ್ರ ತಾಂತ್ರಿಕ ತಜ್ಞರ ಸಮಿತಿ ಪರಿಶೀಲನೆ ನಡೆಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಎಂಡೋಸಲ್ಫಾನ್ ದುಷ್ಪರಿಣಾಮ ಪೀಡಿತ 11 ಪಂಚಾಯಿತಿಗಳಲ್ಲಿ ಪ್ರತ್ಯೇಕ ನ್ಯೂರೋ ಕ್ಲಿನಿಕ್ ಸ್ಥಾಪಿಸಲಾಗುವುದು. ವರ್ಷಕ್ಕೆ ನಾಲ್ಕು ಬಾರಿ ನರರೋಗ ತಜ್ಞರು ಹನ್ನೊಂದು ಪಂಚಾಯತ್ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ರೋಗಿಗಳನ್ನು ಪರೀಕ್ಷಿಸಲಿದ್ದಾರೆ.
ಎಲ್ಲ ಪಂಚಾಯಿತಿಗಳಲ್ಲಿ ನ್ಯೂರೋ ಕ್ಲಿನಿಕ್‍ಗಳಲ್ಲಿ ನರರೋಗ ತಜ್ಞರ ಸೇವೆ ಆರಂಭಿಸಲಾಗಿದೆ. ಪ್ರಸಕ್ತ ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿನ ನರರೋಗ ತಜ್ಞರು ಮತ್ತು ಇತರ ನರವಿಜ್ಞಾನ ತಜ್ಞರ ಸೇವೆ ಪಡೆದುಕೊಳ್ಳಲಾಗುವುದು. ಕಾಸರಗೋಡು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾರ್ಯ ಶೀಘ್ರ ಪೂರ್ಣಗೊಳಿಸಿ, ನಂತರ ರೋಗಿಗಳ ಚಿಕಿತ್ಸೆ ನಡೆಸಲು ಆದ್ಯತೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಆರೋಗ್ಯ ಸೌಲಭ್ಯಗಳ ಕಾರ್ಯಚಟುವಟಿಕೆಗಳು, ಕಟ್ಟಡ ನಿರ್ಮಾಣ ಪ್ರಗತಿ, ಸಿಬ್ಬಂದಿ ಕೊರತೆ ಇತ್ಯಾದಿಗಳನ್ನು ಆರೋಗ್ಯ ಸಚಿವರು ಪರಿಶೀಲಿಸಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಮಾರ್ಚ್‍ನಲ್ಲಿ ಕಾರ್ಯಾರಂಭ-ಸಚಿವೆ ವೀಣಾ ಜಾರ್ಜ್
0
ಜನವರಿ 13, 2023
Tags