ಮುಳ್ಳೇರಿಯ: ಕಲಾವಿದರ ಸಂಘಟನೆಯಾದ ಕೇರಳ ಸ್ಟೇಟ್ ಸ್ಟೇಜ್ ಆರ್ಟಿಸ್ಟ್ ಆಂಡ್ ವರ್ಕರ್ಸ್ ಅಸೋಸಿಯೇಶನ್ (ಸವಾಕ್) ಸಂಘಟನೆಯ ಕಾರಡ್ಕ ಬ್ಲಾಕ್ ಸಮಿತಿಯ ಸಭೆ ಬ್ಲಾಕ್ ಅಧ್ಯಕ್ಷ, ಯಕ್ಷಗಾನ ಕಲಾವಿದ ಅಪ್ಪಕುಂಞÂ ಮಣಿಯಾಣಿಯವರ ಅಧ್ಯಕ್ಷತೆಯಲ್ಲಿ ಮುಳ್ಳೇರಿಯ ಗಣೇಶ ಮಂದಿರದಲ್ಲಿ ಭಾನುವಾರ ನಡೆಯಿತು. ಸವಾಕ್ ಕಾಸರಗೋಡು ಜಿಲ್ಲಾಧ್ಯಕ್ಷರೂ, ಸವಾಕ್ ಕೇರಳ ರಾಜ್ಯ ಸಂಘಟನೆಯ ಕೋಶಾಧಿಕಾರಿಗಳೂ ಆಗಿರುವ ಉಮೇಶ್.ಎಂ.ಸಾಲಿಯಾನ್ ರವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸವಾಕ್ ಸಂಘಟನೆಯ ಎಲ್ಲಾ ಮಾಹಿತಿಗಳನ್ನು ನೀಡಿ ಸಂಘಟನೆಯಿಂದ ಕಲಾವಿದರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಣೆ ನೀಡಿದರು.
ಜಿಲ್ಲಾ ಉಪಾಧ್ಯಕ್ಷ ಪಿ.ದಿವಾಕರ ಕಾಸರಗೋಡು, ಜಿಲ್ಲಾ ಕಾರ್ಯದರ್ಶಿ ಸನ್ನಿ ಅಗಸ್ಟಿನ್ ಉಪಸ್ಥಿತರಿದ್ದರು. ಜನವರಿ 29ರಂದು ಬೇಕಲ್ ರೆಡ್ ಮೂನ್ ಬೀಚ್ ಪರಿಸರದಲ್ಲಿ ನಡೆಯುವ ಜಿಲ್ಲಾ ಕಲೋತ್ಸವ ಮತ್ತು ಕುಟುಂಬ ಸಂಗಮದಲ್ಲಿ ಕಲಾವಿದರು ಭಾಗವಹಿಸುವ ಬಗ್ಗೆ ಕಾರಡ್ಕ ಬ್ಲಾಕ್ ಕಾರ್ಯದರ್ಶಿ ಸತ್ಯನಾರಾಯಣ ಬಲ್ಲಾಳ್ ವಿವರಿಸಿದರು. ಕಾರಡ್ಕ ಬ್ಲಾಕ್ ಸಮಿತಿಗೆ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಬಲ್ಲಾಳ್, ಜೊತೆ ಕಾರ್ಯದರ್ಶಿಯಾಗಿ ಚಂದ್ರನ್ ಸಿ.ಎಚ್ ರವರನ್ನು ಈ ಸಂದರ್ಭ ಸೇರ್ಪಡೆಗೊಳಿಸಲಾಯಿತು. ಹಿರಿಯ ಕಲಾವಿದರಾದ ಬಾಲಕೃಷ್ಣ ಪೆÇಸೊಳಿಗೆ "ಕಲಾರತ್ನ ಪ್ರಶಸ್ತಿ"ಗೆ ಆಯ್ಕೆಗೊಂಡರು. ಸಿಂಗಾರಿ ಮೇಳ,ನಾಟಕ,ನೃತ್ಯ, ಜಾನಪದ,ಗಾಯನ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕಲಾವಿದರು ಉಪಸ್ಥಿತರಿದ್ದರು.
ಸವಾಕ್: ಕಾರಡ್ ಬ್ಲಾಕ್ ಸಭೆ
0
ಜನವರಿ 16, 2023
Tags