HEALTH TIPS

ಕಲೋತ್ಸವಗಳಲ್ಲಿ ಮಾಂಸಾಹಾರಿ ಆಹಾರ ಅಪ್ರಾಯೋಗಿಕ: ಆಹಾರದಲ್ಲಿ ಮತೀಯವಾದ ಹುಟ್ಟು ಹಾಕಲು ಸಚಿವರು ಹಾಗೂ ಸರಕಾರದಿಂದ ಪ್ರಯತ್ನ: ಕೆ.ಪಿ.ಎ.ಮಜೀದ್


           ತಿರುವನಂತಪುರ: ಕಲೋತ್ಸವಗಳಲ್ಲಿ ಮಾಂಸಾಹಾರಿ ಆಹಾರ ಅಪ್ರಾಯೋಗಿಕ ಎಂದು ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಕೆ.ಪಿ.ಎ. ಮಜೀದ್ ಹೇಳಿಕೆ ನೀಡಿದ್ದಾರೆ. ಸಸ್ಯಾಹಾರಿ ಖಾದ್ಯಗಳನ್ನು ಎಲ್ಲರೂ ಸೇವಿಸಬಹುದು. ಮಾಂಸಾಹಾರದಲ್ಲಿ ಆಸಕ್ತಿ ಇಲ್ಲದವರೂ ಸಾಕಷ್ಟು ಮಂದಿ ನಮ್ಮೊಡನಿದ್ದಾರೆ.  ಇದನ್ನು ಗಮನದಲ್ಲಿಟ್ಟುಕೊಂಡು ಕಲೋತ್ಸವವು ಕಾಲಾಂತರಗಳಿಂದ ಒಂದೇ ಒಂದು ಭೋಜನ ರೀತಿಯಲ್ಲಿ ಸಾಗಿಬಂದಿದೆ. ಈಗ ಇಂತಹದೊಂದು ಕಲ್ಪನೆಯನ್ನು ಹೊರಕಕ್ಕಿ  ಎರಡು ವಿಭಾಗೀಯತೆ ಸೃಷ್ಟಿಸುವ ಪರಿಸ್ಥಿತಿ ಇಲ್ಲ. ಇದು ಅಪ್ರಾಯೋಗಿಕವೂ ಆಗಿದೆ. ಒಂದೇ ಬಟ್ಟಲಿನಲ್ಲಿ ಎರಡು ಊಟ ಬಡಿಸುವುದು, ಎರಡು ಬಗೆಯ ಊಟಕ್ಕೆ ಎರಡು ಭೋಜನಶಾಲೆ, ಅಡಿಗೆಯವರ ನೇಮಕ ಸರಿಯಲ್ಲ ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಸ್ಪಷ್ಟಪಡಿಸಿದ್ದಾರೆ.
        ಪೋಸ್ಟ್‍ನ ಪೂರ್ಣ ಪಠ್ಯ-
        ಕೇರಳ ಶಾಲಾ ಕಲೋತ್ಸವದಲ್ಲಿ ಆಹಾರದ ಬಗ್ಗೆ ವಿವಾದವು ದುರದೃಷ್ಟಕರವಾಗಿದೆ. ಆಹಾರದಲ್ಲಿ ಕೋಮುವಾದವನ್ನು ಹುಟ್ಟುಹಾಕುವ ಸಂಪೂರ್ಣ ಜವಾಬ್ದಾರಿ ಶಿಕ್ಷಣ ಸಚಿವರು ಮತ್ತು ಸರ್ಕಾರದ ಮೇಲಿದೆ. ಹಲವು ವರ್ಷಗಳಿಂದ, ಶಾಲಾ ಕಲೋತ್ಸವಕ್ಕೆ ಸಂಬಂಧಿಸಿದಂತೆ ಒಂದು ನಿಶ್ಚಿತ ಭೋಜನ ವ್ಯವಸ್ಥೆ ಸಕ್ರಿಯವಾಗಿದೆ. ಇಲ್ಲಿಯವರೆಗೆ ಅದರ ಬಗ್ಗೆ ಯಾವುದೇ ವಿವಾದಗಳಿಲ್ಲ. ಆದರೆ ಹೊಸ ವಿವಾದವನ್ನು ಯೋಜಿಸಲಾಗಿದೆ. ಕಲೋತ್ಸವದಲ್ಲಿ ಮಾಂಸಾಹಾರಕ್ಕೆ ಬೇಡಿಕೆ ಮೊದಲು ಮೂಡಿದ್ದು ಎಡ ಮುಖಂಡರಿಂದ. ಶಿಕ್ಷಣ ಸಚಿವರು ಇದನ್ನು ಲಘುವಾಗಿ ಪರಿಗಣಿಸಿದ್ದಾರೆ.
           ಸಸ್ಯಾಹಾರಿ ಖಾದ್ಯಗಳನ್ನು ಎಲ್ಲರೂ ಸೇವಿಸಬಹುದಾದ ಅನುಕೂಲತೆ ಇದೆ.  ಮಾಂಸಾಹಾರದಲ್ಲಿ ಆಸಕ್ತಿ ಇಲ್ಲದವರೂ ಇರುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಕಲೋತ್ಸವವು ಯುಗಯುಗಾಂತರಗಳಿಂದ ಒಂದೇ ಒಂದು ಭಜನ ವ್ಯವಸ್ಥೆ ಹೊಂದಿದೆ. ಈಗ ಈ ಕ್ರಮವನ್ನು ಎರಡು ಭಾಗ ಮಾಡುವ ಪರಿಸ್ಥಿತಿ ಇಲ್ಲ. ಇದು ಅಪ್ರಾಯೋಗಿಕವೂ ಆಗಿದೆ. ಒಂದೇ ಬಟ್ಟಲಿನಲ್ಲಿ ಎರಡು ಊಟ, ಎರಡು ಬಗೆಯ ಆಹಾರಕ್ಕೆ ಎರಡು ಭೋಜನ ವ್ಯವಸ್ಥೆ  ನೀಡುವುದು ಸರಿಯಲ್ಲ. ಯಾರದೋ ಮಾತು ಕೇಳಿ ಯಾರೊಂದಿಗೂ ಚರ್ಚಿಸದೆ ನಾನ್ ವೆಜ್ ಖಾದ್ಯಗಳನ್ನು ಬಡಿಸುವುದಾಗಿ ಶಿಕ್ಷಣ ಸಚಿವರು ಘೋಷಿಸಿದ್ದು ಸರಿಯಲ್ಲ.
           ಇಂತಹ ವಿವಾದಗಳು ಧರ್ಮ ಮತ್ತು ಜಾತಿಗಾಗಿ ಮಾತ್ರ ಉಪಯುಕ್ತ. ಆಹಾರದಲ್ಲಿ ಪಂಥವಿಲ್ಲ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries