ತಿರುವನಂತಪುರಂ: ಶಾಲಾ ಬಸ್ಸಿನಲ್ಲಿ ತೆರಳಿದ ತಮ್ಮ ಮಕ್ಕಳು ಎಲ್ಲಿದ್ದಾರೆ, ಹೇಗಿದ್ದಾರೆ ಎಂಬೆಲ್ಲ ಚಿಂತೆ ಇನ್ನು ಪಾಲಕರಿಗೆ ಬೇಡ.
ಅವರ ಬಸ್ ಅನ್ನು ಟ್ರ್ಯಾಕ್ ಮಾಡಲು ಮೋಟಾರು ವಾಹನ ಇಲಾಖೆಯ ಹೊಸ ವ್ಯವಸ್ಥೆ ಸಿದ್ಧವಾಗಿದೆ. ಶಾಲಾ ಬಸ್ ಎಲ್ಲಿಗೆ ತಲುಪಿದೆ, ಬಸ್ ಎಷ್ಟು ವೇಗವಾಗಿ ಚಲಿಸುತ್ತಿದೆ ಎಂಬುದನ್ನು ತಿಳಿಯುವ ವ್ಯವಸ್ಥೆ ಸಿದ್ಧಪಡಿಸಲಾಗಿದೆ.
‘ವಿದ್ಯಾ ವಾಹನ್’ ಮೊಬೈಲ್ ಅಪ್ಲಿಕೇಶನ್ ಮೂಲಕ ಶಾಲಾ ಬಸ್ ಅನ್ನು ಟ್ರ್ಯಾಕ್ ಮಾಡಬಹುದು. ತುರ್ತು ಸಂದರ್ಭದಲ್ಲಿ ಶಾಲಾ ಬಸ್ ಚಾಲಕನಿಗೆ ಕರೆ ಮಾಡುವ ಸೌಲಭ್ಯವೂ ಆ್ಯಪ್ ನಲ್ಲಿದೆ. ವಿದ್ಯಾ ವಾಹನ್ ಮೋಟಾರು ವಾಹನಗಳ ಇಲಾಖೆಯ ಸುರಕ್ಷಾ ಮಿತ್ರ ವೇದಿಕೆಯನ್ನು ಆಧರಿಸಿದೆ.
ಆಫ್ ಬಳಸಲು ಪೋಷಕರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಳ್ಳಬೇಕು. ಶಾಲಾ ಅಧಿಕಾರಿಗಳನ್ನು ಸಂಪರ್ಕಿಸುವ ಮೂಲಕ ಇದನ್ನು ಮಾಡಬಹುದು ಎಂದು ಮೋಟಾರು ವಾಹನ ಇಲಾಖೆ ತಿಳಿಸಿದೆ. ಪ್ರಶ್ನೆಗಳಿಗೆ ಟೋಲ್ ಫ್ರೀ ಸಂಖ್ಯೆ 1800 599 7099 ಕರೆಮಾಡಲು ಸೂಚಿಸಲಾಗಿದೆ. ಮೊದಲ ಹಂತದಲ್ಲಿ ಕೊಚ್ಚಿ, ತಿರುವನಂತಪುರ ಮೆಟ್ರೋ ನಗರದಲ್ಲಷ್ಟೇ ಇದೀಗ ಜಾರಿಗೆ ಬರುತ್ತಿದ್ದು, ಮುಂದೆ ರಾಜ್ಯಾದ್ಯಂತ ಜಾರಿಗೆ ಬರಲಿದೆ.
ಪೋಷಕರಿಗೆ ತಲೆಬಿಸಿ ಬೇಡ: ಶಾಲಾ ಬಸ್ ಅನ್ನು ಟ್ರ್ಯಾಕ್ ಮಾಡಲು, ಮಕ್ಕಳು ಎಲ್ಲಿದ್ದಾರೆಂದು ತಿಳಿಯಲು ಬರುತ್ತಿದೆ ಆಫ್: ಪೋಷಕರಿಗಾಗಿ ಅಪ್ಲಿಕೇಶನ್ ಸಿದ್ಧ
0
ಜನವರಿ 03, 2023