ಹಿಂದೆ ಹಚ್ಚೆ ಹಾಕುವುದು ಸಂಪ್ರದಾಯ ಆದರೆ ಈಗೆಲ್ಲಾ ಟ್ಯಾಟೂ ಎಂಬುವುದು ಫ್ಯಾಷನ್. ಈಗೀನ ಯುವಪೀಳಿಗೆ ಮೈ ಮೇಲೆ ಟ್ಯಾಟೂ ಹಾಕಿಸಲು ತುಂಬಾನೇ ಆಸಕ್ತಿ ತೋರಿಸುತ್ತಾರೆ.
ಪರ್ಮನೆಂಟು ಟ್ಯಾಟೂ, ಟೆಂಪರರಿ ಟ್ಯಾಟೂ ಇದೆ. ಟೆಂಪರರಿ ಆದರೆ ತೊಂದರೆಯಿಲ್ಲ ನೋವೂ ಇಲ್ಲ ಸ್ವಲ್ಪ ಸಮಯದ ನಂತರ ಆ ಟ್ಯಾಟೂ ಹೋಗುತ್ತದೆ. ಆದರೆ ಪರ್ಪನೆಮಟ್ ಟ್ಯಾಟೂ ಆದರೆ ನಾವು ಸಾಯುವವರೆಗೆ ಹಾಗೇ ಇರುತ್ತದೆ.
ಕೆಲವರಿಗೆ ಟ್ಯಾಟೂ ಹಾಕಿಸಿ ಸ್ವಲ್ಪ ಸಮಯ ಕಳೆದ ಮೇಲೆ ಆ ಟ್ಯಾಟೂ ಬೇಡ ತೆಗೆಯಬೇಕೆಂದು ಅನಿಸುತ್ತದೆ. ಒಂದು ಸಲ ಶಾಶ್ವತ ಟ್ಯಾಟೂ ಹಾಕಿಸಿದ ಮೇಲೆ ತೆಗೆಯುವುದು ಕಷ್ಟ, ಹಾಗಂತ ತೆಗೆಯಲು ಸಾಧ್ಯನೇ ಇಲ್ಲ ಎಂದೇನು ಇಲ್ಲ ಈ ರೀತಿ ಟ್ಯಾಟೂ ತೆಗೆಯಬಹುದು ನೋಡಿ:
ಲೇಸರ್ ರಿಮೂವಲ್
ಹೆಚ್ಚಿನವರು ಲೇಸರ್ ರಿಮೂವಲ್ ತುಂಬಾನೇ ಪರಿಣಾಮಕಾರಿ ಎಂದು ಹೇಳಲಾಗುವುದು. ಲೇಸರ್ ಟ್ರೀಟ್ಮೆಂಟ್‌ನಲ್ಲಿ ಟ್ಯಾಟೂ ಸಂಪೂರ್ಣವಾಗಿ ತೆಗೆಯುವುದಿಲ್ಲ, ಆದರೆ ಲೈಟ್ ಮಾಡಲಾಗುವುದು. ಲೇಸರ್ ಟ್ರೀಟ್ಮೆಂಟ್ ಬಳಿಕ ಟ್ಯಾಟೂ ಎದ್ದು ಕಾಣುವುದಿಲ್ಲ. ಲೇಸರ್ ಟ್ರೀಟ್ಮೆಂಟ್‌ನಲ್ಲಿ ಒಂದೇ ಬಾರಿಗೆ ಟ್ಯಾಟೂ ತೆಗೆಯಲು ಸಾಧ್ಯವಿಲ್ಲ. ಕೆಲವು ಸೆಷನ್ ಬೇಕಾಗುವುದು. ಸಾಮಾನ್ಯವಾಗಿ 7-10 ಸೆಷನ್ ಬೇಕಾಗುವುದು.
ಪ್ರತಿ ಸೆಷನ್‌ನಲ್ಲಿ ವೈದ್ಯರು ಸೂಚಿಸಿದ ಸಲಹೆಯನ್ನು ಪಾಲಿಸಬೇಕು. ಪ್ರತಿಬಾರಿ ಗಾಯದ ಡ್ರೆಸ್ಸಿಂಗ್ ಬದಲಾಯಿಸಬೇಕು, ಆಯಿಂಟ್ಮೆಂಟ್ ಹಚ್ಚಬೇಕು.
ಲೇಸರ್ ಟ್ರೀಟ್ಮೆಂಟ್ ತೆಗೆದುಕೊಂಡ ಮೇಲೆ 2 ವಾರದವರೆಗೆ ಈ ರೀತಿ ಎಚ್ಚರವಹಿಸಬೇಕು.
* ಲೇಸರ್ ಟ್ರೀಟ್ಮೆಂಟ್ ಮಾಡಿರುವ ಭಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು
* ಬಿಗಿಯಾದ ಬಟ್ಟೆ ಧರಿಸಬಾರದು
* ಹಚ್ಚೆ ಹಾಕಿಸಿದ್ದ ಭಾಗಕ್ಕೆ ಸೂರ್ಯನ ಕಿರಣಗಳು ಬೀಳಬಾರದು
* ಗುಳ್ಳೆ ಅಥವಾ ಹುಣ್ಣು ಬಂದರೆ ಕೀಳಬಾರದು.
ಸರ್ಜಿಕಲ್ ರಿಮೂವಲ್‌ನಲ್ಲಿ ಟ್ಯಾಟೂ ಕಂಪ್ಲೀಟ್ ತೆಗೆಯಬಹುದು
ಟ್ಯಾಟೂ ಸಂಪೂರ್ಣವಾಗಿ ತೆಗೆಯಲು ಒಂದೇ ಒಂದು ಮಾರ್ಗವೆಂದರೆ ಸರ್ಜಿಕಲ್ ವಿಧಾನ. ಇದರಲ್ಲಿ ಟ್ಯಾಟೂ ಭಾಗವನ್ನು ಕತ್ತರಿಸಿ ಉಳಿದ ತ್ವಚೆಯನ್ನು ಹೊಲಿಯಲಾಗುವುದು. ಇದನ್ನು ಮಾಡಲು ಹೆಚ್ಚು ಖರ್ಚಾಗಲ್ಲ. ಆದರೆ ಚಿಕ್ಕ ಟ್ಯಾಟೂವಾದರೆ ಈ ರೀತಿ ಮಾಡಬಹುದು, ಮೈ ತುಂಬಾ ಟ್ಯಾಟೂ ಹಾಕಿಸಿದ್ದರೆ ಅಥವಾ ದೊಡ್ಡ ಟ್ಯಾಟೂ ಹಾಕಿಸಿದ್ದರೆ ಈ ವಿಧಾನ ಸಾಧ್ಯವಿಲ್ಲ.
ಡೆರ್ಮಾಬ್ರಾಷನ್: ಇದರಲ್ಲಿ ತ್ವಚೆಯ ಮೇಲ್ಪದರ ತೆಗೆದು ಇಂಕ್ ಹೊರ ಹೋಗುವಂತೆ ಮಾಡುವುದು, ಇದರಲ್ಲಿ ರಕ್ತಸ್ರಾವ ಊತ, ಹುಣ್ಣು, ತ್ವಚೆಯ ಬಣ್ಣ ಬದಲಾಗುವುದು ಮುಂತಾದ ಅಡ್ಡಪರಿಣಾಮಗಳ ಸಾಧ್ಯತೆ ಹೆಚ್ಚಿರುವುದರಿಂದ ಇದು ಹೆಚ್ಚು ಪರಿಣಾಮಕಾರಿಯಲ್ಲ.
ಇತರ ವಿಧಾನಗಳೇನು?
ರೆಕ್ಕಿಂಗ್ ಬಾಮ್(Wrecking Balm)
ರೆಕ್ಕಿಂಗ್ ಬಾಮ್ ಶಾಶ್ವತ ಟ್ಯಾಟೂ ತೆಗೆಯಲೆಂದೇ ಇರುವ ಬಾಮ್ ಆಗಿದೆ. ಇದು ಟ್ಯಾಟೂ ತೆಗೆಯಲು ಸಹಕಾರಿ. ಆದರೆ ಈ ಬಾಮ್ ಹಚ್ಚಿದರೆ ಬೇಗನೆ ಟ್ಯಾಟೂ ಹೋಗುವುದಿಲ್ಲ, ತುಂಬಾ ಸಮಯ ಹಚ್ಚಬೇಕಾಗುತ್ತದೆ. ನಿಮಗೆ ಸ್ವಲ್ಪ ಫಲಿತಾಂಶಬ ಕಾಣಬೇಕೆಂದರೆ ಈ ಬಾಮ್ ಪ್ರತಿದಿನ ಹಚ್ಚುತ್ತಾ 6 ತಿಂಗಳು ಕಳೆದಿರಬೇಕು.
ಲೋಳೆಸರ
1 ಚಮಚ ಲೋಳೆಸರಕ್ಕೆ ವಿಟಮಿನ್ ಇ ಹಾಗೂ Paederia Tomentosa ಮಿಕ್ಸ್ ಮಾಡಿ ಟ್ಯಾಟೂ ಮೇಲೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಬಿಸಿ ನೀರಿನಲ್ಲಿ ತೊಳೆಯಬೇಕು, ಈ ರೀತಿ ದಿನದಲ್ಲಿ ತುಂಬಾ ಬಾರಿ ಮಾಡಬೇಕು, ಈ ರೀತಿ ಮಾಡಿದರೆ ಕೆಲವೇ ದಿನಗಳಲ್ಲಿ ಟ್ಯಾಟೂ ಬಣ್ಣ ಮಾಸುವುದು.
ನಿಂಬೆರಸ ಮತ್ತು ಕಲ್ಲುಪ್ಪು
ನಿಂಬೆರಸಕ್ಕೆ ಕಲ್ಲುಪ್ಪು ಸೇರಿಸಿ ಸ್ಕ್ರಬ್ ಮಾಡಬೇಕು ನಂತರ 15 ನಿಮಿಷ ಬಿಟ್ಟು ಬಿಟ್ಟು ಬಿಸಿ ನೀರಿನಲ್ಲಿ ತೊಳೆಯಬೇಕು, ಈ ರೀತಿ ಮಾಡುತ್ತಿದ್ದರೆ ಟ್ಯಾಟೂ ಬಣ್ಣ ಮಾಸುವುದು.
ಸಾಲ್ಟ್ ಸ್ಕ್ರಬ್
ಸಾಲ್ಟ್ ಸ್ಕ್ರಬ್ ಕೂಡ ಶಾಶ್ವತ ಟ್ಯಾಟೂ ತೆಗೆಯಲು ಸಹಕಾರಿ. ಸಾಲ್ಟ್ ಸ್ಕ್ರಬ್ ಮಾಡಿದರೆ ಪಿಗ್ಮೆಂಟೇಷನ್ ಹೋಗಲಾಡಿಸುತ್ತೆ. ಇದರಿಂದ ಸೂಕ್ತ ಫಲಿತಾಂಶ ಸಿಗಬೇಕೆಂದರೆ ಕನಿಷ್ಠ 6 ತಿಂಗಳಾದರೂ ಹಚ್ಚಬೇಕು.