ಮುಂಬೈ: ನಕ್ಸಲ್ ಕಾರ್ಯಕರ್ತೆ ಎಂದು ಆರೋಪಿಸಲಾದ ಅರಣ್ಯ ಹಕ್ಕುಗಳು ಹಾಗೂ ಕೈದಿಗಳ ಹಕ್ಕುಗಳ ಕಾರ್ಯಕತೆ ಹಿಡ್ಮೆ ಮರ್ಕಾಮ್ ಅವರನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ.
ಮಹಾರಾಷ್ಟ್ರದ ದಾಂತೆವಾಡದಲ್ಲಿ ಹಿಂಸಾತ್ಮಕ ನಕ್ಸಲ್ ದಾಳಿಗಳು ಹಾಗೂ ಕೊಲೆ ಪ್ರಕರಣಗಳಿಗೆ ಸಂಬಂಧಿಸಿ ಹಿಡ್ಮೆ ವಿರುದ್ಧ ಐದು ಪ್ರಕರಣಗಳನ್ನು ಮಹಾರಾಷ್ಟ್ರ ಪೊಲೀಸರು ಎರಡು ವರ್ಷಗಳ ಹಿಂದೆ ದಾಖಲಿಸಿದ್ದರು ಹಾಗೂ ಆಕೆಯ ಬಂಧನಕ್ಕೆ 1 ಲಕ್ಷ ರೂ.
ಬಹುಮಾನವನ್ನು ಕೂಡಾ ಘೋಷಿಸಲಾಗಿತ್ತು.
2021ರ ಮಾರ್ಚ್9ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನಕ್ಸಲ್ ಸಂಘರ್ಷ ಪೀಡಿತ ದಾಂತೆವಾಡ ಜಿಲ್ಲೆಯಲ್ಲಿರುವ ಸಮೇಲೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಆದಿವಾಸಿ ಮಹಿಳೆಯರ ಸಭೆಯಲ್ಲಿ ಪಾಲ್ಗೊಂಡಿದ್ದ ಮರ್ಕಾಮ್ರನ್ನು ಪೊಲೀಸರು ಹಠಾತ್ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು.
ಮರ್ಕಾಮ್ ವಿರುದ್ಧ ದೋಷಾರೋಪ ಹೊರಿಸಲಾದ ಎಡು ವರ್ಷಗಳ ಬಳಿಕವೂ ಅವುಗಳನ್ನು ಸಾಬೀತುಪಡಿಸಲು ಪೊಲೀಸರು ವಿಫಲರಾಗಿದ್ದಾರೆಂದು ಆಕೆಯ ನ್ಯಾಯವಾದಿ ಕ್ಸಿತಿಜ್ ದುಬೆ ತಿಳಿಸಿದ್ದಾರೆ. ಮಾರ್ಕಮ್ ವಿರುದ್ಧ ಹೊರಿಸಲಾದ ನಾಲ್ಕು ಪ್ರಕರಣಗಳಲ್ಲಿ ಆಕೆ ದೋಷಮುಕ್ತರಾಗಿದ್ದು, ಇನ್ನೊಂದು ಪ್ರಕರಣದಲ್ಲಿ ಸೆಶನ್ಸ್ ನ್ಯಾಯಾಲಯವು ಜಾಮೀನು ನೀಡಿದೆ. ಐದನೆ ಪ್ರಕರಣದಲ್ಲಿ ಮಾರ್ಕಮ್ಗೆ ಕೆಲವು ತಿಂಗಳುಗಳ ಹಿಂದೆಯೇ ಜಾಮೀನು ದೊರೆತಿತ್ತು. ಆದರೆ ಇತರ ನಾಲ್ಕು ಪ್ರಕರಣಗಳ ದೋಷಮುಕ್ತಿಗಾಗಿ ಕಾಯಬೇಕಾಗಿತ್ತಾರಿಂದ ಬಿಡುಗಡೆ ಸಾಧ್ಯವಾಗಿರಲಿಲ್ಲ. ನಾಲ್ಕನೆ ಪ್ರಕರಣದಲ್ಲಿಯೂ ಅವರು ಜನವರಿ 4ರಂದು ದೋಷಮುಕ್ತಿಗೊಂಡರು.
ಹೀಗಾಗಿ ಜನವರಿ 5ರಂದು ಮರ್ಕಾಮ್ ಜಗದಾಳ್ಪುರದ ಕೇಂದ್ರೀಯ ಕಾರಾಗೃಹದಿಂದ ಬಿಡುಗಡೆಗೊಂಡಿದ್ದಾರೆಂದು ನ್ಯಾಯವಾದಿ ಕ್ಷಿತಿಜ್ ತಿಳಿಸಿದ್ದಾರೆ.